Tumakuru : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Tumakuru : 2023ರ ಜೂನ್ನಲ್ಲಿ ತುಮಕೂರು ಜಿಪಂ ಸಿಇಒ ಆಗಿ ನೇಮಕಗೊಂಡಿದ್ದ ಜಿ.ಪ್ರಭು ಅವರು, ಜಿಲ್ಲೆಯಲ್ಲಿ ಯಾವುದೇ ವಿವಾದಗಳಿಲ್ಲದೆ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದ್ದರು.
ಸದ್ದಿಲ್ಲದೆ ಆದರೆ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ನೀಡಿದ್ದ ಅವರ ಸೇವೆ ಜಿಲ್ಲಾಡಳಿತ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿತ್ತು ಜೊತೆಗೆ ತುಮಕೂರು ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ, ಸ್ವಚ್ಛತೆ, ಸಾಮಾಜಿಕ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಿ.ಪ್ರಭು ಅವರ ಕಾರ್ಯಶೈಲಿ ಮುಖಾಂತರ ಗಮನ ಸೆಳೆದಿದ್ದರು .
ಇದನ್ನೂ ಓದಿ : Ganavi Suraj Suicide Case ಗೆ ಬಿಗ್ ಟ್ವಿಸ್ಟ್ .. 9 ಮಂದಿ ಮೇಲೆ FIR..!

ಆಡಳಿತಾತ್ಮಕ ಶಿಸ್ತು, ಪಾರದರ್ಶಕತೆ ಹಾಗೂ ಸಮಯಪಾಲನೆಯ ಮೂಲಕ ಅವರು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮಾದರಿಯಾಗಿದ್ದರು..
ರಾಜ್ಯ ಸರ್ಕಾರದ ಈ ವರ್ಗಾವಣೆಯಿಂದಾಗಿ ಜಿ.ಪ್ರಭು ಅವರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದು, ಅಲ್ಲಿಯೂ ತಮ್ಮ ಅನುಭವ ಹಾಗೂ ಕಾರ್ಯಕ್ಷಮತೆಯಿಂದ ಜನಪರ ಆಡಳಿತ ನೀಡುವ ವಿಶ್ವಾಸ ವ್ಯಕ್ತವಾಗಿದೆ..

ಅವರ ವರ್ಗಾವಣೆಯಿಂದ ತೆರವಾದ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಹುದ್ದೆಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ…

ಪ್ರಾಮಾಣಿಕತೆ, ನಿಷ್ಠೆ ಹಾಗೂ ಸೇವಾಭಾವದಿಂದ ಕಾರ್ಯನಿರ್ವಹಿಸಿರುವ ಜಿ.ಪ್ರಭು ಅವರ ಮುಂದಿನ ಆಡಳಿತಾತ್ಮಕ ಪಯಣ ಇನ್ನಷ್ಟು ಉಜ್ವಲವಾಗಲಿ ಎಂಬ ಹಾರೈಕೆಗಳು ಎಲ್ಲೆಡೆ ವ್ಯಕ್ತವಾಗಿವೆ. ಅವರ ಹೊಸ ಜವಾಬ್ದಾರಿಗೆ ನಿಮ್ಮ ಪ್ರಜಾ ಶಕ್ತಿ ಟಿವಿ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತದೆ…
MUST WATCH: TUMAKURU | ಹೊಸ ವರ್ಷಾಚರಣೆಗೂ ಮುನ್ನ ಅಪಘಾ ಗಂಭೀರ ಗಾಯಗಳಾಗಿ ಬೈಕ್ ಸವಾರ ಸಾ*




