Pavagada : ಪಾವಗಡ ತಾಲೂಕಿನಲ್ಲಿ ತಾಯಿ ಮಕ್ಕಳ ಸುರಕ್ಷತೆಗೆ ನಿರ್ಮಿಸಿರುವ ಕಟ್ಟಡವು ಈಗಲೋ ಆಗಲೋ ಬೀಳುವ ಹಂತ ತಲುಪಿದ್ದು, ಪ್ರತಿದಿನ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Pavagada : ಪಾವಗಡ ತಾಲೂಕಿನಲ್ಲಿ ತಾಯಿ ಮಕ್ಕಳ ಸುರಕ್ಷತೆಗೆ ನಿರ್ಮಿಸಿರುವ ಕಟ್ಟಡವು ಈಗಲೋ ಆಗಲೋ ಬೀಳುವ ಹಂತ ತಲುಪಿದೆ. ತಾಯಿ ಮಕ್ಕಳ ಸುರಕ್ಷತೆಗಾಗಿ 15 ಕೋಟಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಿ ಕೇವಲ ಕೆಲವೇ ದಿನಗಳು ಆಗಿರುವುದು.
ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ಬಿರುಕು
ತಾಯಿ ಮಕ್ಕಳ ಆಸ್ಪತ್ರೆಯ ಕಟ್ಟಡ ಕೋಣೆಯ ಸುತ್ತಲು ಬಿರುಕು ಬಿಟ್ಟಿದ್ದು, ಪ್ರತಿನಿತ್ಯ ಸಂಚರಿಸುವ ಜನರು ಹಾಗೂ ರೋಗಿಗಳು ಜೀವಭಯದಲ್ಲಿ ಓಡಾಡುವಂತಾಗಿದೆ.
ಈ ದುಸ್ಥಿತಿ ಕಂಡರು ಕೂಡ ಯಾವೊಬ್ಬ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲವೆಂದು ಸಾರ್ವಜನಿಕರು ಗಂಭೀರ ಆರೋಪ ಮಾಡುತ್ತಿದ್ದಾರೆ.15 ಕೋಟಿ ವೆಚ್ಚದ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ಕೆಲವೇ ದಿನಗಳು ಆಗಿದ್ದು, ಬಿರುಕು ಬಿಟ್ಟಿದ್ದು, ರೋಗಿಗಳು ಆತಂಕದಲ್ಲಿದ್ದಾರೆ.
ಈ ಕಟ್ಟಡವನ್ನು ನೋಡಿದ್ರೆ ಸರ್ಕಾರಿ ಕಟ್ಟಡಗಳು ಯಾವ ಮಟ್ಟ ಇರುತ್ತದೆ ಎಂಬುದು ಈ ಒಂದು ಕಾಮಗಾರಿಗಳಿಂದ ತಿಳಿದು ಬರುತ್ತದೆ.

ಇದನ್ನೂ ಓದಿ : ಪಾವಗಡ RMC ಯಾರ್ಡ್ನಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆ
15 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಕಟ್ಟಡ
ಪಾವಗಡ ಗಡಿಭಾಗದಲ್ಲಿ ಬಹುದಿನಗಳ ಬೇಡಿಕೆಗಳಂತೆ ಇಂತಹ ಘಟನೆಗಳು ನಿರ್ಮಾಣವಾಗುವುದೇ ಕಷ್ಟಕರ. ಅಂತದರಲ್ಲಿ ಇಂಥ ಕಟ್ಟಡಗಳು ಕಟ್ಟಿದ ಕೆಲವೇ ದಿನಗಳಲ್ಲಿ ಇಂತಹ ದುಸ್ಥಿತಿ ತಲುಪಿರುವುದು ದುರದೃಷ್ಟಕರ ಸಂಗತಿ.
ಇನ್ನು ಈ ತಾಯಿ ಮಕ್ಕಳ ಆಸ್ಪತ್ರೆಯ ಕೊಠಡಿಯು ತಾಲೂಕು ಆರೋಗ್ಯ ಆಡಳಿತ ಅಧಿಕಾರಿ ಕೊಠಡಿಯ ಮುಂದೆಯೇ ಬಿರುಕು ಬಿಟ್ಟಿದ್ದು, ಈ ಹಿಂದೆ ಈ ಕಟ್ಟಡದ ವಿಚಾರವಾಗಿ ಬಿಜೆಪಿ ಸರ್ಕಾರದಲ್ಲಿ 40% ವಿಚಾರವಾಗಿ ಸುದ್ದಿಯಾಗಿತ್ತು.
ಇನ್ನು ರೋಗಿಗಳು ಒಳಗಡೆ ಓಡಾಡಲು ಸೂಕ್ತವಾದ ಗಾಡಿಗಳಿಲ್ಲ. ಇತ್ತ ರೋಗಿಗಳು ಆಸ್ಪತ್ರೆಯ ಬಳಿ ಬಂದರೆ ಯಾವೊಬ್ಬ ಸಿಬ್ಬಂದಿಯೂ ಕೂಡ ಆಂಬುಲೆನ್ಸ್ ಬಳಿ ಬರುವುದೇ ಇಲ್ಲವಂತೆ.
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೇಕಾದಂತ ಮೂಲಭೂತ ಸೌಕರ್ಯಗಳು ಕೊರತೆ ಇದ್ದು, ಅದನ್ನು ಕೂಡಲೇ ಸಂಬಂಧಪಟ್ಟ ಶಾಸಕರು ಮತ್ತು ಅಧಿಕಾರಿಗಳು ಒದಗಿಸಿಕೊಡಬೇಕಾಗಿದೆ.
MUST WATCH : ತಾಯಿ ಮಕ್ಕಳ ಆಸ್ಪತ್ರೆ ಗೋಡೆ ಬಿರುಕು ಜೀವ ಭಯದಲ್ಲಿಯೇ ರೋಗಿಗಳ ನರಳಾಟ




