New Year ಗೆ ಕೆಲವೇ ಗಂಟೆಗಳು ಮಾತ್ರ ಬಾಕಿ – ನಾಳೆಯಿಂದ 6 ದೊಡ್ಡ ಬದಲಾವಣೆಗಳು ಆಗಲಿವೆ.

2025ರ ವರ್ಷ ಮುಗಿಯಲು ಕೆಲವೇ ಗಂಟೆಗಳು ಮಾತ್ರ ಬಾಕಿ ಇದ್ದು, ನಾಳೆಯಿಂದ ಹೊಸ ವರ್ಷ ಪ್ರಾರಂಭ ಆಗಲಿವೆ. ಇನ್ನು ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ, ಆಧಾರ್ ಕಾರ್ಡ್, ಪಡಿತರ ಚೀಟಿ, ಪ್ಯಾನ್ ಸೇರಿ ದೊಡ್ಡ ಬದಲಾವಣೆಗಳು ಆಗುತ್ತವೆ. ಆದ್ರಂತೆ ಜನವರಿ 2026ರಲ್ಲಿಯೂ ಕೆಲವು ದೊಡ್ಡ ಬದಲಾವಣೆಗಳು ಜಾರಿಗೆ ಬರಲಿವೆ.
ಬೆಲೆಗಳನ್ನು ಪರಿಷ್ಕಕಣೆ
ಹೌದು ನಾಳೆಯಿಂದ ಕ್ರೆಡಿಟ್ ಸ್ಕೋರ್ ಅಪ್ಡೇಟ್ಸ್, ಸಾಲಗಳ ಮೇಲಿನ ಕಡಿಮೆ ಬಡ್ಡಿದರಗಳು ಮತ್ತು ಕಡ್ಡಾಯ ಪ್ಯಾನ್ ಆಧಾರ್ ಲಿಂಕ್ ಜಾರಿಗೆ ಬರುತ್ತಿವೆ.
ತೈಲ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಬೆಲೆಗಳನ್ನು ಪರಿಷ್ಕರಿಸುತ್ತವೆ. ಇದ್ರ ಪರಿಣಾಮ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದ್ದು, ಬೆಲೆ ಏರಿಕೆ ಅಥವಾ ಇಳಿಕೆ ಆಗುವ ಸಾಧ್ಯತೆ ಹೆಚ್ಚಾಗಿದೆ.

ಸಾಲವನ್ನು ಪಡೆಯಲು ಅನುಕೂಲ
ಇನ್ನು New Year ನಿಂದ ಕ್ರೆಡಿಟ್ ಸ್ಕೋರ್ ನವೀಕರಣ ಅವಧಿಯನ್ನು ಕಡಿಮೆ ಮಾಡಲಾಗುತ್ತಿದೆ. ಜನವರಿ 2026ರಿಂದ ಕ್ರೆಡಿಟ್ ಸ್ಕೋರ್ ಅವಧಿಯನ್ನು 15 ದಿನಗಳಲ್ಲಿ ನವೀಕರಿಸಲಾಗುತ್ತದೆ.
ಇದ್ರಿಂದ ಜನರು ಸಾಲವನ್ನು ಪಡೆಯಲು ಅನುಕೂಲ ಆಗಲಿದೆ.
ಇದನ್ನು ಓದಿ : ಕೌಟುಂಬಿಕ ಕಲಹ – ಪತಿಯಿಂದ ಪತ್ನಿಯ ಹತ್ಯೆ
ಪ್ಯಾನ್ ಕಾರ್ಡ್ ಕ್ಯಾನ್ಸಲ್ ಆಗೋ ಚಾನ್ಸ್
ಇತ್ತ ಆಧಾರ್- ಪಾನ್ ಕಾರ್ಡ್ನನ್ನು ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಡಿಸೆಂಬರ್ 31, 2025ರೊಳಗೆ ಫ್ಯಾನ್- ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಪ್ಯಾನ್ ಕ್ಯಾನ್ಸಲ್ ಆಗೋ ಚಾನ್ಸ್ ಜಾಸ್ತಿ ಇರುತ್ತದೆ. ಇದ್ರ ಜೊತೆಗೆ ವಾಟ್ಸಪ್, ಇನ್ ಸ್ಟಾ ಗ್ರಾಂ ಮತ್ತು ಟೆಲಿಗ್ರಾಂ ಅಪ್ಲಿಕೇಶನ್ಗಳಿಗೆ ಸಿಮ್ ಕಾರ್ಡ್ ಕಡ್ಡಾಯ ಎಂದು ಸರ್ಕಾರ ಘೋಷಿಸಿದೆ.

ಹೊಸ ರೂಲ್ಸ್ ಜಾರಿ
ಅಪ್ಲಿಕೇಶನ್ಗಳ ವೆರಿಫೈಗೆ ಈ ಹಿಂದೆಯೇ ಜಿ- ಮೇಲ್ ಅಕೌಂಟ್ ಮೂಲಕ ಮಾಡಲಾಗುತ್ತಿತ್ತು. ಈಗ ಅಪ್ಲಿಕೇಶನ್ ವೆರಿಫೈಗೆ ಸಿಮ್ ಕಾರ್ಡ್ ಕಡ್ಡಾಯವಾಗಿದ್ದು, ಸಿಮ್ ಇಲ್ಲದೇ ಅಪ್ಲಿಕೇಶನ್ಗಳನ್ನು ತೆರೆಯಲು ಸಾದ್ಯವಿಲ್ಲ.
ಒಟ್ನಲ್ಲಿ 2026ರ ವರ್ಷದ ಆರಂಭದಲ್ಲಿ ಹೊಸ ರೂಲ್ಸ್ ಜಾರಿ ಆಗಲಿದ್ದು, ಜನರು ಇವನ್ನು ಫಾಲೋ ಮಾಡಬೇಕಿದೆ.
ಇದನ್ನು ನೋಡಿ : SERVICE ROADಗಳೇ ಲಾರಿಗಳ PARKING – ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ




