Dharwad : ಎಸ್ ಬಿಐ ಬ್ಯಾಕ್ ಹಿಂಬದಿಯ ಗೋಡೆ ಹೊಡೆದು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ.

Dharwad : ರಾಜ್ಯದಲ್ಲಿ ದಿನೇ ದಿನೇ ಬ್ಯಾಂಕ್ ದರೋಡೆ ಸೇರಿದಂತೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಐನಾತಿ ಕಳ್ಳರ ಗುಂಪೊಂದು ಎಸ್ ಬಿಐ ಬ್ಯಾಂಕ್ ಹಿಂದಿನ ಗೋಡೆ ಹೊಡೆಯಲು ಪ್ರಯತ್ನ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ.
ನವಲಗುಂದದಲ್ಲಿ ಎಸ್ಬಿಐ ಬ್ಯಾಂಕ್ ದರೋಡೆ ಯತ್ನ, ಕಳ್ಳರು ಪರಾರಿ
ಕಳೆದ ರಾತ್ರಿ ನಾಲ್ವರು ಖದೀಮರು ಬ್ಯಾಂಕ್ ಹಿಂದಿನ ಗೋಡೆ ಒಡೆಯಲು ಪ್ರಯತ್ನಿಸಿದ್ದು, ಸ್ವಲ್ಪ ಗೋಡೆ ಹೊಡೆದ ನಂತರ ಶಬ್ದ ಬಂದ ಹಿನ್ನಲೆ ಅರ್ಧಕ್ಕೆ ನಿಲ್ಲಿಸಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ದೇವಸ್ಥಾನದ ಹುಂಡಿ ಒಡೆದು ಕಳ್ಳತನ ಮಾಡಿ ಕಳ್ಳರು ಎಸ್ಕೇಪ್

ಎಂದಿನಂತೆ ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಬ್ಯಾಂಕ್ ನಲ್ಲಿ ಸುಮಾರು ಐದು ಕೋಟಿ ಮೌಲ್ಯದ ಗೋಲ್ಡ್ ಹಾಗೂ ಹನ್ನೋಂದು ಲಕ್ಷ ನಗದು ಇತ್ತು ಎನ್ನಲಾಗಿದ್ದು, ಸದ್ಯ ಯಾವುದು ಕಳ್ಳತನವಾಗಿಲ್ಲ ಎನ್ನಲಾಗಿದೆ.
ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶ್ವಾನದಳ ಸಿಬ್ಬಂದಿ ಜೊತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
MUST WATCH : ಖತರ್ನಾಕ್ ಕಳ್ಳರು SBI ಬ್ಯಾಂಕ್ ಗೆ ಕನ್ನ ಹಾಕಿದ್ರು-ಅದ್ಯಾಕೋ ಏನೂ ದೋಚದೆ ವಾಪಾಸ್ ಹೋದ್ರು..?




