ನಟ Mohanlal ಅವರ ತಾಯಿ ನಿಧನರಾಗಿದ್ದಾರೆ.

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ಲಾಲ್ ಅವರ ತಾಯಿ ಶಾಂತಕುಮಾರಿ ಅವರು ಇಂದು ಕೊಚ್ಚಿಯ ಎಲಮಕ್ಕರದಲ್ಲಿರುವ ಕುಟುಂಬದ ನಿವಾಸದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಗೆ ಕರೆತಂದಿದ್ದರು
ಮೂಲತಃ ಪತ್ತನಂತಿಟ್ಟದ ಎಳಂತೂರಿನವರಾದ ಶಾಂತಕುಮಾರಿ ಅವರು ತಮ್ಮ ಪತಿ ವಿಶ್ವನಾಥನ್ ನಾಯರ್ ಅವರೊಂದಿಗೆ ತಿರುವನಂತರಪುರದಲ್ಲಿ ನೆಲೆಸಿದ್ದರು. ಪಾರ್ಶ್ವವಾಯುವಿಗೆ ಒಳಗಾದ ಬಳಿಕ Mohanlal ತಮ್ಮ ತಾಯಿಯನ್ನು ಹೆಚ್ಚಿನ ಚಿಕಿತ್ಸೆ ಹಾಗೂ ಆರೈಕೆಗೆಂದು ಕೊಚ್ಚಿಗೆ ಕರೆತಂದಿದ್ದರು. ಇತ್ತೀಚೆಗೆ, ಆಗಸ್ಟ್ 10ರಂದು ಕೊಚ್ಚಿಯಲ್ಲೇ ಅವರು ತಮ್ಮ 90ನೇ ಹುಟ್ಟುಹಬ್ಬವನ್ನು ಕುಟುಂಬದವರ ಜೊತೆ ಆಚರಿಸಿದ್ದರು.
ಇದನ್ನು ನೋಡಿ : ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕ್ರಿಯೆಗೆ ಪತಿ ಒತ್ತಡ; ಪತ್ನಿ ದೂರು
ಮಹತ್ವದ ಪಾತ್ರ
ಇನ್ನು ಶಾಂತಕುಮಾರಿ ಅವರ ಹಿರಿಯ ಪುತ್ರ ಪ್ಯಾರೇಲಾಲ್ ಅವರು 2000ರಲ್ಲಿ ನಿಧನರಾಗಿದ್ದರು. ಕುಟುಂಬದ ಮೇಲೆ ಅಪಾರ ಪ್ರೀತಿ ಹೊಂದಿದ್ದ ಶಾಂತಕುಮಾರಿ, ಮೋಹನ್ಲಾಲ್ ಅವರ ಜೀವನ ಮತ್ತು ವೃತ್ತಿಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ನನ್ನ ಜೀವನದ ದೊಡ್ಡ ಭಾಗ್ಯ
ಮೋಹನ್ಲಾಲ್ ತಮ್ಮ ಚಲನಚಿತ್ರ ವೃತ್ತಿಜೀವನದ ಮೇಲೆ ತಾಯಿಯ ಪ್ರಭಾವ ಅಪಾರವಾಗಿತ್ತು ಎಂದು ಹಲವಾರು ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದಾರೆ. ಇತ್ತೀಚೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಬಳಿಕ, “ಈ ಗೌರವವನ್ನು ನನ್ನ ತಾಯಿಯೊಂದಿಗೆ ಹಂಚಿಕೊಳ್ಳಲು ಸಾಧ್ಯವಾದುದು ನನ್ನ ಜೀವನದ ದೊಡ್ಡ ಭಾಗ್ಯ” ಎಂದು ಅವರು ಭಾವನಾತ್ಮಕವಾಗಿ ಹೇಳಿಕೊಂಡಿದ್ದರು. ಪ್ರಶಸ್ತಿ ಪಡೆದ ತಕ್ಷಣವೇ ನಟ ಮೊದಲು ತನ್ನ ತಾಯಿಯನ್ನು ಭೇಟಿಯಾಗಿದ್ದರು.
ಇದನ್ನು ಓದಿ : 2026ರ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡ ಪ್ರಕಟ!
ತಾಯಿಯನ್ನು ನೋಡಿಕೊಳ್ಳಲು ಸಮಯ ಮೀಸಲು
ಮೋಹನ್ಲಾಲ್ ತನ್ನ ತಾಯಿಯೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು. ಸಿನಿಮಾ ಕೆಲಸಗಳು, ಬಿಡುವಿಲ್ಲದ ಸಮಯದ ಹೊರತಾಗಿಯೂ ತನ್ನ ತಾಯಿಯನ್ನು ನೋಡಿಕೊಳ್ಳಲು ನಟ ಸಮಯ ಮೀಸಲಿಡುತ್ತಿದ್ದರು.




