Chikkamagaluru : ಚಿಕ್ಕಮಗಳೂರು ಹೊರವಲಯದ ಅಕ್ಷಯ್ ಬಾರ್ನಲ್ಲಿ ಸಿಗರೇಟ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ.

Chikkamagaluru : ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಅಕ್ಷಯ್ ಬಾರ್ನಲ್ಲಿ ಸಿಗರೇಟ್ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಬಾರ್ನಲ್ಲಿ ಗಲಾಟೆ-ಯುವಕನಿಗೆ ಚಾಕು ಇರಿತ
ಸಿಗರೇಟ್ ವಿಚಾರವಾಗಿ ಬಾರ್ನೊಳಗೆ ಎರಡು ಗುಂಪುಗಳ ನಡುವೆ ವಾಗ್ವಾದ ಆರಂಭವಾಗಿ, ಅದು ನಂತರ ಗಲಾಟೆಗೆ ತಿರುಗಿದೆ. ಈ ವೇಳೆ ಮುಗ್ತಿಹಳ್ಳಿಯ ಅನಿಲ್ ಕುಮಾರ್ ಎಂಬುವರಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಹಳೆಯ ದ್ವೇಷಕ್ಕೆ ರೌಡಿಶೀಟರ್ನ ಭೀಕರ ಕೊಲೆ..!
ಆರೋಪಿ ಪೊಲೀಸರ ವಶಕ್ಕೆ
ಘಟನೆಯ ಬಳಿಕ ಆರೋಪಿಯಾಗಿರುವ ಯುವಕ ಲಿಖಿತ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾರ್ನಲ್ಲಿ ನಡೆದ ಗಲಾಟೆಯ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತನಿಖೆಗೆ ಸಹಕಾರಿಯಾಗಿವೆ.
ಗಂಭೀರವಾಗಿ ಗಾಯಗೊಂಡ ಅನಿಲ್ ಕುಮಾರ್ ಅವರನ್ನು ತಕ್ಷಣ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
MUST WATCH : APMC ಬಳಿ ಅನಾಮಿಕ ಶ* ಪತ್ತೆ – ಶ* ಕಂಡು ಬೆಚ್ಚಿ ಬಿದ್ದ ಸ್ಥಳೀಯ




