Pavagada ದಲ್ಲಿ ಇಂದು ಅನಾಮಿಕ ವ್ಯಕ್ತಿಯ ಶವ ಪತ್ತೆಯಾಗಿದೆ.

Pavagada ಪಟ್ಟಣದ RMC ಯಾರ್ಡ್ ನಲ್ಲಿ ಇಂದು ಬೆಳಿಗ್ಗೆ ಅನಾಮಿಕ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇಂದು ನಡೆಯುವ ಸಂತೆಗೆ ಬಂದ ಜನರು ಶವವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆ
ಇನ್ನು ಶವವು ಸುಮಾರು ಎರಡು ಮೂರು ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತನ ಕುತ್ತಿಗೆ ಭಾಗದಲ್ಲಿ ಬಲವಾದ ಪೆಟ್ಟು ಬಿದ್ದಿರುವ ಗುರುತುಗಳು ಕಂಡುಬಂದಿದ್ದು, ಯಾರೋ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿ ಶವವನ್ನ ಇಲ್ಲಿ ತಂದು ಎಸೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಇನ್ನು ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನು ನೋಡಿ : RELATIONSHIP TRAP | ಅಕ್ರಮ ಸಂಬಂಧಕ್ಕೆ ಬಲಿಯಾದ್ನಾ ಯುವಕ-ಆತ ಬಿಟ್ರು ಸಂಬಂಧ
ಹೆಚ್ಚಿನ ನಿಗಾ ವಹಿಸಬೇಕೆಂದು ಆಗ್ರಹ
ಈ ಯಾರ್ಡ್ ನಲ್ಲಿ ಪ್ರತಿ ಸೋಮವಾರ ತರಕಾರಿ ಸಂತೆ ಹಾಗೂ ಜಿಲ್ಲೆಯಲ್ಲೇ ಅತೀದೊಡ್ಡ ಕುರಿಸಂತೆ ನಡೆಯುತ್ತೇ. ಹೀಗಾಗಿ ರಾಜ್ಯದ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಹಾಗೂ ರೈತರು ಆಗಮಿಸ್ತಾರೆ. ಆದ್ರೆ ಈ ಪ್ರದೇಶವನ್ನ ಸಂಬಂಧಪಟ್ಟ ಇಲಾಖೆ ಸಮರ್ಪಕವಾಗಿ ಬಳಕೆಗೆ ತರುವಲ್ಲಿ ವಿಫಲವಾಗಿರೋದ್ರಿಂದ, ಸಂಜೆಯಾದ್ರೆ ಸಾಕು ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ಆರೋಪಗಳು ಕೇಳಿಬರ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಈ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಕರಣ ದಾಖಲು
ಸದ್ಯ ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಗುರುತು ಇನ್ನು ಪತ್ತೆಯಾಗಿಲ್ಲ. ಪೊಲೀಸರು ತನಿಖೆಯಿಂದಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ಇದನ್ನು ಓದಿ : ಇತಿಹಾಸ ಸೃಷ್ಟಿಸಿದ ‘ಜನನಾಯಕನ್’ ಆಡಿಯೋ ಲಾಂಚ್!




