
MYSURU : ವೈಭವದಿಂದ ನಡೆಯುತ್ತಿರುವ ಮೈಸೂರು ದಸರಾ ಉತ್ಸವದ ಅಂಗವಾಗಿ ಇಂದು ಬೆಳಗ್ಗೆ ಪ್ರಖ್ಯಾತ ಲೇಖಕಿ ಬಾನು ಮುಷ್ತಾಕ್ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.
ಹಸಿರು ಬಾರ್ಡರ್ ಹೊಂದಿದ ಹಳದಿ ಮೈಸೂರು ರೇಷ್ಮೆ ಸೀರೆ ತೊಟ್ಟು, ತಲೆಗೆ ಮೈಸೂರು ಮಲ್ಲಿಗೆ ಮುಡಿದು ಬಾನು ಮುಷ್ತಾಕ್ ಅವರು ಮುಖ್ಯಮಂತ್ರಿ ಸಿದ್ದ ರಾಮಯ್ಯ ಮತ್ತು ಸಚಿವರ ಜೊತೆ ದೇವಸ್ಥಾನಕ್ಕೆ ಆಗಮಿಸಿದರು. ಗರ್ಭಗುಡಿಯ ಮುಂಭಾಗದಲ್ಲಿ ನಿಂತು ತಾಯಿ ಚಾಮುಂಡಿಗೆ ಭಕ್ತಿಯಿಂದ ನಮನ ಸಲ್ಲಿಸಿದರು. ನಂತರ ಗಣಪತಿಗೆ ಪ್ರಾರ್ಥನೆ ಸಲ್ಲಿಸಿ, ಮಂಗಳಾರತಿ ಹಾಗೂ ಪ್ರಸಾದ ಸ್ವೀಕರಿಸಿದರು.
ಇನ್ನು ಚಾಮುಂಡಿ ಬೆಟ್ಟಕ್ಕೆ ಬಾನು ಮುಷ್ತಾಕ್ ಅವರ ಇಡೀ ಕುಟುಂಬದ ಸದಸ್ಯರು ಸಹ ಆಗಮಿಸಿದ್ದರು. ಖಾಸಗಿ ಹೋಟೆಲಿನಿಂದ ಕಾರಿನಲ್ಲಿ ಅವರು ಬೆಟ್ಟದತ್ತ ಪ್ರಯಾ ಣಿಸಿ ದೇವಾಲಯಕ್ಕೆ ಬಂದರೆ, ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಐರಾವತ ಬಸ್ಸಿನಲ್ಲಿ ಆಗಮಿಸಿದರು.
ಮಹಿಷಾಸುರ ಪ್ರತಿಮೆ ಬಳಿ ಜಾನಪದ ಕಲಾ ತಂಡಗಳು ಗಣ್ಯರನ್ನು ಸಂಗೀತ ಹಾಗೂ ನೃತ್ಯದ ಮೂಲಕ ಭವ್ಯವಾಗಿ ಸ್ವಾಗತಿಸಿತು. ನಂತರ ಬಾನು ಮುಷ್ತಾಕ್, ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ದೇವಾಲಯದ ಒಳಗಡೆ ಪ್ರವೇಶಿಸಿ ವಿಶೇಷ ಪೂಜೆ ಯಲ್ಲಿ ಭಾಗವಹಿಸಿದರು.




