Railway Fare Hike : ಇಂದಿನಿಂದ ರೈಲ್ವೆ ಟಿಕೆಟ್ ದರ ಹೆಚ್ಚಳ.

Railway Fare Hike : ಡಿಸೆಂಬರ್ 21ರಂದು ರೈಲ್ವೆ ಸಚಿವಾಲಯ ಘೋಷಿಸಿದ್ದ ರೈಲು ಟಿಕೆಟ್ ದರ ಏರಿಕೆ ಇಂದಿನಿಂದ (ಶುಕ್ರವಾರ) ಜಾರಿಗೆ ಬಂದಿದೆ. 215 ಕಿಲೋಮೀಟರ್ಗಿಂತ ಹೆಚ್ಚಿನ ದೂರ ಪ್ರಯಾಣಿಸುವ ಸಾಮಾನ್ಯ ಹಾಗೂ ಮೇಲ್–ಎಕ್ಸ್ಪ್ರೆಸ್ ರೈಲುಗಳ ಟಿಕೆಟ್ ದರವನ್ನು ಪ್ರತಿ ಕಿಲೋಮೀಟರ್ಗೆ ಹೆಚ್ಚಿಸಲಾಗಿದೆ. 215 ಕಿ.ಮೀ. ಮೀರಿದ ಸಾಮಾನ್ಯ ರೈಲುಗಳ ಟಿಕೆಟ್ ದರವನ್ನು ಪ್ರತಿ ಕಿ.ಮೀಗೆ 1 ಪೈಸೆ, ಎಸಿ ಮತ್ತುAC ಸೌಲಭ್ಯವಿಲ್ಲದ ಮೇಲ್ ಹಾಗೂ ಎಕ್ಸ್ಪ್ರೆಸ್ ರೈಲುಗಳಲ್ಲಿ ಪ್ರತಿ ಕಿ.ಮೀಗೆ 2 ಪೈಸೆ ಹೆಚ್ಚಿಸಲಾಗಿದೆ.
ವರ್ಷದಲ್ಲೇ ಎರಡನೇ ಬಾರಿ ದರ ಏರಿಕೆ
ಒಂದೇ ವರ್ಷದಲ್ಲಿ ರೈಲ್ವೆ ಟಿಕೆಟ್ ದರ ಹೆಚ್ಚುತ್ತಿರುವುದು ಇದು ಎರಡನೇ ಬಾರಿ. ಕಳೆದ ಜುಲೈ ತಿಂಗಳಲ್ಲಿಯೂ ದರ ಏರಿಕೆ ಮಾಡಲಾಗಿತ್ತು. ಈ ಬಾರಿ ಏರಿಕೆ ಅಲ್ಪಮಟ್ಟದಲ್ಲಿದ್ದು, 500 ಕಿ.ಮೀ. ನಾನ್-ಎಸಿ ಪ್ರಯಾಣಕ್ಕೆ ಕೇವಲ 10 ರೂ. ಹೆಚ್ಚಳವಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಪಾಸ್ ಹೊಂದಿರುವ ಪ್ರಯಾಣಿಕರಿಗೆ ಈ ದರ ಏರಿಕೆಯು ಯಾವುದೇ ಪರಿಣಾಮ ಬೀರದು.
ಎರಡನೇ ದರ್ಜೆ ಸಾಮಾನ್ಯ ಪ್ರಯಾಣದ ದರ ಏರಿಕೆ ವಿವರ
215 ಕಿ.ಮೀ. ಮೀರಿದ ಎರಡನೇ ದರ್ಜೆಯ ಸಾಮಾನ್ಯ ಪ್ರಯಾಣಿಕರಿಗೆ ದರಗಳನ್ನು ಸ್ಲ್ಯಾಬ್ ಆಧಾರದಲ್ಲಿ ಹೆಚ್ಚಿಸಲಾಗಿದೆ.
- 216 ರಿಂದ 750 ಕಿ.ಮೀ.: 5 ರೂ. ಹೆಚ್ಚಳ
- 751 ರಿಂದ 1,250 ಕಿ.ಮೀ.: 10 ರೂ. ಹೆಚ್ಚಳ
- 1,251 ರಿಂದ 1,750 ಕಿ.ಮೀ.: 15 ರೂ. ಹೆಚ್ಚಳ
- 1,751 ರಿಂದ 2,250 ಕಿ.ಮೀ.: 20 ರೂ. ಹೆಚ್ಚಳ
ಇದನ್ನು ಓದಿ : ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ದಾರುಣ ಸಾವು
ಸ್ಲೀಪರ್ ಮತ್ತು ಫಸ್ಟ್ ಕ್ಲಾಸ್ ದರಗಳಲ್ಲಿ ಪರಿಷ್ಕರಣೆ
ಉಪನಗರವಲ್ಲದ ಪ್ರಯಾಣಗಳಿಗೆ ಸ್ಲೀಪರ್ ಕ್ಲಾಸ್ ಆರ್ಡಿನರಿ ಹಾಗೂ ಫಸ್ಟ್ ಕ್ಲಾಸ್ ಆರ್ಡಿನರಿ ದರಗಳನ್ನು ಪ್ರತಿ ಕಿ.ಮೀಗೆ 1 ಪೈಸೆ ಹೆಚ್ಚಿಸುವಂತೆ ಪರಿಷ್ಕರಿಸಲಾಗಿದೆ. ಇದನ್ನು ಕ್ರಮೇಣ ಹಾಗೂ ಮಧ್ಯಮ ದರ ಏರಿಕೆ ಎಂದು ರೈಲ್ವೆ ಸಚಿವಾಲಯ ಬಣ್ಣಿಸಿದೆ.
ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಮೇಲೆ ಪರಿಣಾಮ
ಮೇಲ್ ಮತ್ತು ಎಕ್ಸ್ಪ್ರೆಸ್ ಸೇವೆಗಳಲ್ಲಿ ಸ್ಲೀಪರ್, ಫಸ್ಟ್ ಕ್ಲಾಸ್, ಎಸಿ ಚೇರ್ ಕಾರ್, ಎಸಿ 3-ಟೈರ್, ಎಸಿ 2-ಟೈರ್ ಹಾಗೂ ಎಸಿ ಫಸ್ಟ್ ಕ್ಲಾಸ್ ಸೇರಿ ಎಲ್ಲಾ ಎಸಿ ಮತ್ತು ನಾನ್-ಎಸಿ ತರಗತಿಗಳ ದರವನ್ನು ಪ್ರತಿ ಕಿ.ಮೀಗೆ 2 ಪೈಸೆ ಹೆಚ್ಚಿಸಲಾಗಿದೆ. ಉದಾಹರಣೆಗೆ, 500 ಕಿ.ಮೀ. ದೂರ ಪ್ರಯಾಣಿಸುವ ನಾನ್-ಎಸಿ ಮೇಲ್ ಅಥವಾ ಎಕ್ಸ್ಪ್ರೆಸ್ ಪ್ರಯಾಣಿಕರು 10 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಯಾವೆಲ್ಲ ರೈಲುಗಳಿಗೆ ಅನ್ವಯ?
ಪರಿಷ್ಕೃತ ದರಗಳು ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ತೇಜಸ್, ಗತಿಮಾನ್, ಹಮ್ಸಫರ್, ಅಮೃತ್ ಭಾರತ್, ಗರೀಬ್ ರಥ, ಅಂತ್ಯೋದಯ, ಜನ ಶತಾಬ್ದಿ, ಯುವ ಎಕ್ಸ್ಪ್ರೆಸ್ ಹಾಗೂ ನಮೋ ಭಾರತ್ ರಾಪಿಡ್ ರೈಲ್ ಸೇರಿದಂತೆ ಬಹುತೇಕ ಪ್ರಮುಖ ರೈಲು ಸೇವೆಗಳಿಗೆ ಅನ್ವಯವಾಗಲಿವೆ.
ಇದನ್ನು ನೋಡಿ : MYSURU PALACE ಮುಂದೆ ಭಾರೀ ಸ್ಪೋಟ – ಓರ್ವ ಸಾವು, ಮೂವರ ಸ್ಥಿತಿ ಗಂಭೀರ




