
GADAG NEWS : ಗದಗದ ತಿಮ್ಮಾಪುರ ಗ್ರಾಮದ ಬಳಿ ಇಂದು ಬೆಳಿಗ್ಗೆ ಕುಕನೂರಿನಿಂದ ಗದಗದತ್ತ ಬರು ತ್ತಿದ್ದ ಖಾಸಗಿ ಬಸ್ನ ಮುಂದಿನ ಚಕ್ರ ಎಕ್ಸೆಲ್ ಕಟ್ ಆದ ಪರಿಣಾಮ ಬಸ್ನ ಚಕ್ರವೇ ಕಳಚಿದೆ. ಬಸ್ನಲ್ಲಿ ಸುಮಾರು 40 ಕ್ಕೂ ಅಧಿಕ ಪ್ರಯಾಣಿಕರಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಈ ಘಟನೆಯ ಬಳಿಕ ಬಸ್ ನಿರ್ವಹಣೆಯಲ್ಲಿನ ಲೋಪಗಳ ಬಗ್ಗೆ ಹಲವಾರು ಆರೋಪಗಳು ಕೇಳಿಬರುತ್ತಿವೆ. ಗ್ಯಾರಂಟಿ ಎಫೆಕ್ಟ್ ನಿಂದ ಬಸ್ ಗಳು ನಿರ್ವಹಣೆ ಆಗ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ತಗ್ಗು ತಗ್ಗುಂಡಿಗಳಿಂದ ತುಂಬಿರುವ ರಸ್ತೆಗಳ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿವೆ. ಇನ್ನು ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿ ದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.




