BBK S12 : ಬಿಗ್ ಬಾಸ್ ಕನ್ನಡ 12 ರಿಯಾಲಿಟಿ ಶೋನಲ್ಲಿ ಕಾವ್ಯ ಶೈವವನ್ನು ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಸೂರಜ್ ಸಿಂಗ್ ವಿರುದ್ಧ ನಡೆದ ಮತದಾನ ಪ್ರಕ್ರಿಯೆಯಲ್ಲಿ ಬಹುತೇಕ ಮನೆಯ ಸದಸ್ಯರು ಕಾವ್ಯ ಪರವಾಗಿ ವೋಟ್ ಹಾಕಿದರು.

BBK S12 : ಬಿಗ್ ಬಾಸ್ ಕನ್ನಡ 12 ರಿಯಾಲಿಟಿ ಶೋನಲ್ಲಿ ಕಾವ್ಯ ಶೈವವನ್ನು ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ.
ಸೂರಜ್ ಸಿಂಗ್ ವಿರುದ್ಧ ನಡೆದ ಮತದಾನ ಪ್ರಕ್ರಿಯೆಯಲ್ಲಿ ಬಹುತೇಕ ಮನೆಯ ಸದಸ್ಯರು ಕಾವ್ಯ ಪರವಾಗಿ ವೋಟ್ ಹಾಕಿದರು.
ಆದರೆ ಕಾವ್ಯ ಕ್ಯಾಪ್ಟನ್ ಆದರೂ ಅವರ ಆಪ್ತ ಗೆಳೆಯ ಗಿಲ್ಲಿ ನಟ ಕ್ಯಾಪ್ಟನ್ ರೂಮ್ಗೆ ಹೋಗದೆ ಎಲ್ಲರ ಅಚ್ಚರಿಗೆ ಕಾರಣವಾಯಿತು.
ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ
ಕಾವ್ಯ ಮತ್ತು ಸೂರಜ್ ಅವರನ್ನು ಕನ್ಫೇಷನ್ ರೂಮ್ ಗೆ ಕರೆದಿದ್ದು, ಗಾರ್ಡನ್ ಏರಿಯಾದಲ್ಲಿ ಫೋಟೋಗಳ ಮೂಲಕ ವೋಟಿಂಗ್ ನಡೆಯಿತು. ಆರಂಭದಲ್ಲಿ ರಾಶಿಕಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಸೂರಜ್ಗೆ ವೋಟ್ ಹಾಕಿದರೂ,
ಉಳಿದ ಎಲ್ಲಾ ವೋಟ್ಗಳು ಕಾವ್ಯ ಶೈವಗೆ ಬಂತು. ಗಿಲ್ಲಿ, ಸ್ಪಂದನಾ, ರಘು, ರಜತ್, ಮಾಳು ಮತ್ತು ಇತರರು ಕಾವ್ಯಕ್ಕೆ ವೋಟ್ ಹಾಕಿ, ಅವರನ್ನು ಕ್ಯಾಪ್ಟನ್ ಮಾಡಿದರು.
MUST READ : Pavagada Accident News : ಕಾರು ಚಾಲಕ ಸ್ಥಳದಲ್ಲೇ ಸಾವು, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..!!
ಗಿಲ್ಲಿಯಲ್ಲಿ ಕಂಡು ಬಂದ ಬದಲಾವಣೆ
ಹಿಂದೆ ಯಾರೇ ಕ್ಯಾಪ್ಟನ್ ಆಗಿದರೂ, ಗಿಲ್ಲಿ ಕ್ಯಾಪ್ಟನ್ ರೂಮ್ ಗೆ ಹೋಗಿ ಸಂಭ್ರಮಿಸುತ್ತಿದ್ದರು.
ಆದರೆ ಈ ಬಾರಿ ತಮ್ಮ ಗೆಳತಿ ಕಾವ್ಯ ಗೆದ್ದರೂ, ಗಿಲ್ಲಿ ಆರಂಭದಲ್ಲಿ ರೂಮ್ ಬಳಿ ಇರಲಿಲ್ಲ. ಹಿಂದಿನ ಘಟನೆಯಿಂದ ಸುದೀಪ್ ಗಮನಹರಿಸಿ, ರೂಮ್ಗೆ ಬೀಗ ಹಾಕಿದ್ದರು.
ಆದರೆ, ಕಾವ್ಯ ಶೈವ ಒತ್ತಾಯ ಮಾಡಿದ ಬಳಿಕ ಗಿಲ್ಲಿ ರೂಮ್ಗೆ ಹೋಗಿ ವಾಪಸ್ ಬಂದಿದ್ದಾರೆ.
ಈಗ ಕಾವ್ಯ ಕ್ಯಾಪ್ಟನ್ ಆದ ಕಾರಣ, ಈ ವಾರ ಅವರಿಗೆ ಇಮ್ಯೂನಿಟಿ ಸಿಕ್ಕಿದೆ.
ಪ್ರಮುಖ ವಿಚಾರವೆಂದರೆ, ಗಿಲ್ಲಿ ಸರಿಯಾಗಿ ಕೆಲಸ ಮಾಡುತ್ತಾನೆಯೋ ಇಲ್ಲವೋ ಎಂಬುದು.
ಹಿಂದಿನ ಕ್ಯಾಪ್ಟನ್ಗಳು ಗಿಲ್ಲಿಯಿಂದ ಕೆಲಸ ಮಾಡಿಸಲು ಪ್ರಯತ್ನಿಸಿದ್ದಾರೆ, ಆದರೆ ಕಾವ್ಯ ಶೈವ ಈ ಬಾರಿ ಅದನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೆ ಎಂಬುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನು ನೋಡಿ : ಹಲಸು ಮತ್ತು ಹುಣಸೇಹಣ್ಣು ಬೋರ್ಡ್ ರಚನೆಗೆ ಕೇಂದ್ರ ಸರ್ಕಾರಕ್ಕೆ ದೇವೇಗೌಡರ ಮನವಿ : ಬಯಲುಸೀಮೆ ರೈತರಿಗೆ ಅನುಕೂಲ




