Chikkaballapur : ನಗರದಲ್ಲಿ ಟಿಪ್ಪರ್ ಲಾರಿ, ಆಟೋ ಹಾಗೂ ಬೊಲೆರೋ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಅಪಘಾತದಲ್ಲಿ ಅದೃಷ್ಟವಶಾತ್ ಮೂರು ವಾಹನಗಳ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Chikkaballapur : ವಾಪಸಂದ್ರ ಸೇತುವೆ ಬಳಿ ಭೀಕರ ಅಪಘಾತ
ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಸೇತುವೆ ಬಳಿ ಈ ಘಟನೆ ನಡೆದಿದೆ. ನೋಡುನೋಡುತ್ತಿದ್ದಂತೆ ಟಿಪ್ಪರ್ ಲಾರಿಯು ಬೊಲೆರೋ ಮತ್ತು ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೊಲೆರೋ ವಾಹನ ಪಲ್ಟಿಯಾಗಿದೆ.
ಅಪಘಾತದ ವೇಳೆ ಬೊಲೆರೋದಲ್ಲಿ ತುಂಬಿದ್ದ ಚೆಂಡು ಹೂಗಳು ರಸ್ತೆಯೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಇದನ್ನು ಓದಿ : ಸರಳವಾಗಿ ಮದುವೆಯಾಗಲು ರೆಡಿಯಾದ Ugram Manju..!!

ಟಿಪ್ಪರ್ ಕೆಳಗೆ ಸಿಲುಕಿದ ಆಟೋ
ಅಪಘಾತದ ಭೀಕರತೆಯಿಂದ ಆಟೋ ಒಂದು ಟಿಪ್ಪರ್ ಲಾರಿಯ ಕೆಳಗೆ ಸಿಲುಕಿಕೊಂಡಿದೆ. ಕೂಡಲೇ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು ಧಾವಿಸಿ, ಚಾಲಕರನ್ನು ಸುರಕ್ಷಿತವಾಗಿ ಹೊರತೆಗೆದು ಪ್ರಾಣ ರಕ್ಷಿಸಿದ್ದಾರೆ.
ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ
ಘಟನೆಯ ಮಾಹಿತಿ ತಿಳಿದ ತಕ್ಷಣ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಅಪಘಾತಕ್ಕೊಳಗಾದ ವಾಹನಗಳ ತೆರವು ಕಾರ್ಯ ನಡೆಸಿದರು. ಬಳಿಕ ಸಂಚಾರವನ್ನು ಸುಗಮಗೊಳಿಸಲಾಯಿತು.
ಇದನ್ನು ನೋಡಿ : ಡಿಸಿ ಕಚೇರಿಗೆ ಬಾಂಬ್ ಬೆದರಿಕೆ HASSAN DC ಏನಂದ್ರು ಗೊತ್ತಾ




