ವಿವಿಧ ಜಿಲ್ಲಾಧಿಕಾರಿ ಕಚೇರಿಗಳಿಗೆ ನಕಲಿ Bomb Threat ಇ- ಮೇಲ್ಗಳು ಬರುತ್ತಿವೆ.

ದೇಶದ ವಿವಿಧ ಜಿಲ್ಲಾಧಿಕಾರಿ ಕಚೇರಿಗಳಿಗೆ ನಕಲಿ ಬಾಂಬ್ ಬೆದರಿಕೆ ಇ- ಮೇಲ್ಗಳು ಬರುತ್ತಿರುವ ಬೆನ್ನಲ್ಲೇ, ಹಾಸನ ಜಿಲ್ಲಾಧಿಕಾರಿ ಕಚೇರಿಗೂ ಆರ್ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಇ-ಮೇಲ್ ಮೂಲಕ ಬೆದರಿಕೆ ಬಂದಿರುವ ಘಟನೆ ನಡೆಯಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ರು. ಅದಾದ ಬಳಿಕ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದ್ರು.

ಇದನ್ನು ಓದಿ : H.D ಕುಮಾರಸ್ವಾಮಿ ಹುಟ್ಟು ಹಬ್ಬಕ್ಕೆ ಪ್ರಧಾನಿ ಮೋದಿಯಿಂದ ಸ್ಪೆಷಲ್ ವಿಶ್
Bomb Threat ಇ ಮೇಲ್ ಬಂದ ಹಿನ್ನಲೆ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ರವರಿಂದ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಕಚೇರಿಗೆ ಐದು ಬಾಂಬ್ ಹಿಡುವುದಾಗಿ ಹುಸಿ ಬೆದರಿಕೆ ಇ-ಮೇಲ್ ಬಂದಿತ್ತು. ತಕ್ಷಣವೇ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ವಿ.

ಇನ್ನು ಕೂಡಲೇ ಬಂದ ಪೊಲೀಸರು ಮತ್ತು ಸ್ವ್ಕಾಡ್ ತಂಡವರು ಪರಿಶೀಲನೆ ನಡೆಸಿದರು. ಈ ವೇಳೆ ಅಂತಹ ಯಾವುದೇ ಬಾಂಬ್ ಸುಳಿವು ಸಿಕ್ಕಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ಸಾಭೀತಾಗಿದೆ. ಜಿಲ್ಲೆಯ ಜನತೆ ಭಯಪಡುವ ಅಗತ್ಯವಿಲ್ಲ ಎಂದರು.

ಇದನ್ನು ನೋಡಿ : ಡಿಸಿಸಿಯಿಂದ ಕುಣಿಗಲ್ ಗೆ ಅನ್ಯಾಯ ಆಗಿದೆ! ಶಾಸಕ ರಂಗನಾಥ್ ಗೆ ಸಿಎಂ ಏನಂದ್ರು




