Political News : “ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿಲ್ಲ ಎಂದು ವಾರ್ನಿಂಗ್ ಮಾಡಿ ಪತ್ರ ಬರೆದಿದ್ದಾರೆ. ನಾವು ದೊಡ್ಡ ವೋಟ್ ಬ್ಯಾಂಕ್ ಅಂತ ಹೇಳ್ತಾರೆ. ಕೆಲವರಿಗೆ ನಾನು ಯಾರು ಅನ್ನೋದೇ ಗೊತ್ತಿಲ್ಲ. ಬೇಸಿಕ್ ಕಾಮನ್ಸೆನ್ಸ್ ಇಟ್ಟುಕೊಂಡು ನನ್ನ ಹತ್ರ ಡೀಲ್ ಮಾಡಬೇಕು..

Political News : ಕರ್ನಾಟಕ ಅಪಾರ್ಟ್ಮೆಂಟ್ ಮಾಲಿಕತ್ವ ಮತ್ತು ನಿರ್ವಹಣಾ ವಿಧೇಯಕ–2025
(Karnataka Apartment Bill 2025) ಕುರಿತು ವಿಧಾನಸೌಧದಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ ನಡೆದ ಚರ್ಚೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಿರಣ್ ಹೆಬ್ಬಾರ್ ಎಂಬವರು ಬರೆದ ಪತ್ರದ ವಿಚಾರವಾಗಿ ಅವರು ವೇದಿಕೆಯಲ್ಲೇ ಖಾರವಾಗಿ ಪ್ರತಿಕ್ರಿಯಿಸಿದರು.
ಪತ್ರದ ವಿಚಾರಕ್ಕೆ ತೀಕ್ಷ್ಣ ಉತ್ತರ
“ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿಲ್ಲ ಎಂದು ವಾರ್ನಿಂಗ್ ಮಾಡಿ ಪತ್ರ ಬರೆದಿದ್ದಾರೆ. ನಾವು ದೊಡ್ಡ ವೋಟ್ ಬ್ಯಾಂಕ್ ಅಂತ ಹೇಳ್ತಾರೆ. ಕೆಲವರಿಗೆ ನಾನು ಯಾರು ಅನ್ನೋದೇ ಗೊತ್ತಿಲ್ಲ.
ಬೇಸಿಕ್ ಕಾಮನ್ಸೆನ್ಸ್ ಇಟ್ಟುಕೊಂಡು ನನ್ನ ಹತ್ರ ಡೀಲ್ ಮಾಡಬೇಕು. ವಾರ್ನಿಂಗ್, ಬೆದರಿಕೆಗಳು ನಮ್ಮ ಸರ್ಕಾರದ ವಿರುದ್ಧ ನಡೆಯಲ್ಲ” ಎಂದು ಡಿಕೆಶಿ ಹೇಳಿದರು.
‘ನಾನು ಯಾರಿಗೂ ಹೆದರಲ್ಲ’
“ಪ್ರಧಾನಿ, ಕೇಂದ್ರ ಸರ್ಕಾರ, ಗೃಹ ಸಚಿವರಿಗೂ ಹೆದರದೇ ಜೈಲಿಗೆ ಹೋದವನು ನಾನು.
ಈ ಹೆಬ್ಬಾರ್ಗೆ ಹೆದರಬೇಕಾ?” ಎಂದು ಪ್ರಶ್ನಿಸಿದ ಅವರು, “ಎಲ್ಲರನ್ನೂ ಹೆದರಿಸಿದ ಹಾಗೆ ನನ್ನ ಜೊತೆ ಡೀಲ್ ಮಾಡಲು ಆಗಲ್ಲ” ಎಂದು ಸ್ಪಷ್ಟಪಡಿಸಿದರು.
ವೋಟು ಮತ್ತು ಭ್ರಮೆಗಳ ಬಗ್ಗೆ ಸ್ಪಷ್ಟನೆ
“ನಮಗೆ ಏನು ಬೇಕು? ವೋಟು ಹಾಕ್ತೀರಾ ಅಂತಷ್ಟೇ. ಬೆಂಗಳೂರಿನಲ್ಲಿ ಬಿಜೆಪಿಗೆ ಹೆಚ್ಚು ವೋಟ್ ಕೊಟ್ಟಿದ್ದೀರಾ ತಾನೆ? ಭ್ರಮೆಯಲ್ಲಿ ಇರಬೇಡಿ. ಬೆದರಿಕೆ ಹಾಕೋದು ನಮ್ಮ ಸರ್ಕಾರದ ವಿರುದ್ಧ ನಡೆಯಲ್ಲ” ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಉಲ್ಲೇಖ
“ನಮ್ಮ ಗ್ಯಾರಂಟಿ ಯೋಜನೆಗಳು ನಿಮಗೆ ತಲುಪಿಲ್ಲವೇ? ನಮ್ಮ ಗ್ಯಾರಂಟಿಗಳನ್ನು ಬಿಜೆಪಿ ತನ್ನ ರಾಜ್ಯಗಳಲ್ಲೂ ಜಾರಿ ಮಾಡುತ್ತಿದೆ. ಇದನ್ನೆಲ್ಲಾ ಮೊದಲು ತಿಳಿದುಕೊಳ್ಳಿ” ಎಂದು ಡಿಕೆಶಿ ಹೇಳಿದರು.
ಅಪಾರ್ಟ್ಮೆಂಟ್ ನಿವಾಸಿಗಳಿಗೆ ಭರವಸೆ
“ನಿಮ್ಮನ್ನು ಕರೆಯಬೇಕು ಅಂತ ನಿಯಮವಿಲ್ಲದಿದ್ದರೂ, ನಿಮ್ಮನ್ನೆಲ್ಲಾ ಕರೆದು ಮಾತನಾಡುತ್ತಿದ್ದೇವೆ.
ನನ್ನ ಮೇಲೆ ವಿಶ್ವಾಸ ಇಟ್ಟು ನೀವು ಬಂದಿದ್ದೀರಿ. ನಾನು ಸಾವಿರಾರು ಅಪಾರ್ಟ್ಮೆಂಟ್ ಕಟ್ಟಿಸಿದ್ದೇನೆ, ಜಾಗ ಕೊಟ್ಟಿದ್ದೇನೆ. ಅಧಿಕಾರಿಗಳು ಸಹಕರಿಸದಿದ್ದರೆ ಏನು ಮಾಡ್ತೀರಾ?” ಎಂದು ಪ್ರಶ್ನಿಸಿ, ತಮ್ಮ ನೇರ ದಿಟ್ಟ ನಿಲುವು ಮುಂದುವರಿಸಿದರು.




