Sira ನಗರದಾದ್ಯಂತ ಬೀದಿ ಕಾಟ ಹೆಚ್ಚಾಗಿದೆ.

ತುಮಕೂರು ಜಿಲ್ಲೆಯಾದ್ಯಂತ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಬೀದಿಗೆ ಬಂದ್ರೆ ಸಾಕು ಎಲ್ಲಿ ನಾಯಿಗಳು ಕಚ್ಚುತ್ವೋ ಎಂಬ ಭಯದಲ್ಲೇ ನಿತ್ಯ ಜನರು ಓಡಾಡುವ ಪರಿಸ್ಥಿತಿ ಇದೆ. ಇತ್ತ Sira ನಗರದ ಹಲವು ಏರಿಯಾಗಳಲ್ಲಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಪ್ರತಿನಿತ್ಯ ಓಡಾಡಲು ಭಯಪಡುವಂತಾಗಿದೆ.
ಮಿತಿಮೀರಿದ ಬೀದಿನಾಯಗಳ ಕಾಟ
ಶಿರಾದಲ್ಲಿ ಬೀದಿ ನಾಯಿಗಳ ಕಾಟ ಮಿತಿ ಮೀರಿದ್ದು, ಬೀದಿ ನಾಯಿಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ. ರಸ್ತೆಗೆ ಬರಲು ಮಕ್ಕಳು, ಮಹಿಳೆಯರು, ವಯಸ್ಸಾದವ್ರು ಹೆದರುವಂತಾಗಿದೆ. ಇನ್ನು ನಾಯಿಗಳು ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದು, ರಾತ್ರಿ ವೇಳೆ ನಿರಂತರ ಹಾವಳಿಯಿಂದ ಜನರ ನಿದ್ದೆಗೆಡಿಸುತ್ತಿವೆ. ಈ ದೃಶ್ಯಗಳ ವಿಡಿಯೋಗಳು Social Media ದಲ್ಲಿ Viral ಆಗಿದ್ದು, ಸಾರ್ವಜನಿಕರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.
ಇದನ್ನು ಓದಿ : ಕೊಂಚ ಇಳಿಕೆ ಕಂಡ ಚಿನ್ನದ ದರ

ನಾಯಿ ಕಡಿತ ಪ್ರಕರಣಗಳು ಹೆಚ್ಚು
ಇನ್ನು ಪ್ರತಿನಿತ್ಯ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿವೆ. ವೃದ್ಧರು ಬೆಳಗಿನ ವಾಯುವಿಹಾರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಮಕ್ಕಳು ಹೊರಗೆ ಬಿಡಲು ಪಾಲಕರು ಭಯಪಡುತ್ತಿದ್ದಾರೆ. ಕೆಲ ಮಾರ್ಗಗಳಲ್ಲಿ ನಾಗರಿಕರು ಸಂಚರಿಸುವುದಕ್ಕೂ ಎದರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಾಂಸದಂಗಡಿಗಳ ಬಳಿಯಿರುವ ನಾಯಿಗಳಿಗೆ ಚರ್ಮರೋಗಗಳು ಕಾಣಿಸಿಕೊಂಡಿದ್ದು, ಇದ್ರಿಂದ ಸೋಂಕು ಹರಡುವ ಆತಂಕವೂ ಹೆಚ್ಚಾಗಿದೆ.
ಕ್ರಮ ಕೈಗೊಳ್ಳಬೇಕೆಂದು ಆಗ್ರಹ
ಒಟ್ನಲ್ಲಿ ಬೀದಿ ನಾಯಿಗಳ ಹಾವಳಿಗೆ ಬೇಸತ್ತಿರುವ ಜನರು ನಗರಸಭೆ ಆಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನ ತಕ್ಷಣ ಜಾರಿಗೆ ತಂದು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನು ನೋಡಿ : HASSAN|ಲಾರಿ ಗುದ್ದಿ ಟಿಸಿ ಸ್ಥಳದಲ್ಲೇ ಸಾ* – ಟಿಕೆಟ್ ಚೆಕ್ಕಿಂಗ್ ವೇಳೆ ಅಪಘಾ*




