Hanuman Dhwaja Importance : ಆಧುನಿಕ ಯುಗದಲ್ಲಿಯೂ, ಹನುಮಧ್ವಜವು ಪೀಡೆ, ಮಾಟ, ಮಂತ್ರ, ಅನಾರೋಗ್ಯ ಮತ್ತು ಮಾನಸಿಕ ಚಿತ್ರಹಿಂಸೆಗಳಿಂದ ಮನೆಯನ್ನು ರಕ್ಷಿಸಿ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ

Hanuman Dhwaja Importance : ಹನುಮಧ್ವಜವನ್ನು ಮನೆಯ ಮೇಲೆ ಇಟ್ಟರೆ ಅದು ರಕ್ಷಣೆ ಮತ್ತು ಶುಭವನ್ನು ತರುತ್ತದೆ. ಕುರುಕ್ಷೇತ್ರ ಯುದ್ಧದಲ್ಲೂ ಅರ್ಜುನನ ರಥಕ್ಕೆ ಹನುಮನ ಬಾವುಟ ಇದ್ದುದರಿಂದ ರಥಕ್ಕೆ ಯಾವುದೇ ಹಾನಿಯಾಗಲಿಲ್ಲ ಎನ್ನಲಾಗುತ್ತದೆ.
ಅದೇ ರೀತಿ, ಇಂದಿನ ಕಾಲದಲ್ಲೂ ಹನುಮಧ್ವಜವು ಮಾಟ–ಮಂತ್ರ, ಪೀಡೆ, ಅನಾರೋಗ್ಯ ಮತ್ತು ಮಾನಸಿಕ ಒತ್ತಡಗಳಿಂದ ಮನೆಯನ್ನು ರಕ್ಷಿಸಿ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ..
ನೀವು ಕಟ್ಟಿಸಿದ ಮನೆಯಾಗಿರಲಿ, ಬಾಡಿಗೆ ಮನೆಯೇ ಆಗಿರಲಿ ಅಥವಾ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರಲಿ, ಮನೆಯ ಮೇಲ್ಭಾಗದಲ್ಲಿ ಹನುಮಧ್ವಜವನ್ನು ಇರಿಸುವುದು ಅತ್ಯಂತ ಶುಭಕರ.
ಬಟ್ಟೆಯಿಂದ ತಯಾರಾದ ಈ ಬಾವುಟದಲ್ಲಿ ಭಕ್ತಾಂಜನೇಯ, ವೀರಾಂಜನೇಯ ಅಥವಾ ಅಭಯಾಂಜನೇಯ ರೂಪದ ಹನುಮನ ಚಿತ್ರ ಇರಬಹುದು. ಇಂತಹ ಧ್ವಜವನ್ನು ಮನೆಯ ಮೇಲೆ ಕಟ್ಟಿದರೆ, ಮನೆಗೆ ಎಲ್ಲಾ ರೀತಿಯ ಶುಭ, ರಕ್ಷಣೆ ಮತ್ತು ಸಕಾರಾತ್ಮಕ ಶಕ್ತಿ ಲಭಿಸುತ್ತದೆ ಎಂದು ನಂಬಲಾಗಿದೆ.

ತ್ರಿಕಾಲಗಳಲ್ಲಿ — ಬ್ರಾಹ್ಮೀ ಮುಹೂರ್ತ, ಅಭಿಜಿತ್ ಮುಹೂರ್ತ, ಗೋದೋಳಿ ಮುಹೂರ್ತ — ದೇವರ ದಿವ್ಯ ಶಕ್ತಿ ಭೂಮಿಯ ಮೇಲೆ ಸಂಚರಿಸುತ್ತದೆ. ಅಂಥ ಪವಿತ್ರ ಸಮಯದಲ್ಲಿ ಮನೆಯ ಮೇಲಿರುವ ಹನುಮಧ್ವಜ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ನೀಡುತ್ತದೆ ಎಂದು ನಂಬಿಕೆ ಇದೆ.
ಇದಕ್ಕೆ ಕುರುಕ್ಷೇತ್ರ ಯುದ್ಧವೇ ಉದಾಹರಣೆ- ಅರ್ಜುನನ ರಥದಲ್ಲಿ ಹನುಮನ ಬಾವುಟ ಇರುವಾಗ ರಥಕ್ಕೆ ಯಾವುದೂ ಹಾನಿಯಾಗಲಿಲ್ಲ. ಹನುಮನು ರಥದಿಂದ ಹೊರಟ ಕ್ಷಣವೇ ರಥವು ಅಗ್ನಿಗೆ ಆಹುತಿಯಾದ ಕಥೆ ಪುರಾಣಗಳಲ್ಲಿ ಬರುತ್ತದೆ. ಹನುಮಧ್ವಜ ಇರುವುದು ರಕ್ಷಣೆಯ ಪ್ರಬಲ ಸಂಕೇತವೆಂದು ಇದು ತೋರಿಸುತ್ತದೆ.
ಹನುಮಧ್ವಜವನ್ನು ಮನೆಯ ಮೇಲೆ ಇರಿಸುವುದರಿಂದ ಧರ್ಮನಿಷ್ಠರ ಮೇಲೆ ಹನುಮನ ಕೃಪೆ ಸದಾ ಇರುತ್ತದೆ. ಇದು ಪೀಡೆ, ಪಿಶಾಚಿ, ಮಾಟ-ಮಂತ್ರ, ಅನಾರೋಗ್ಯ ಮತ್ತು ಮಾನಸಿಕ ತೊಂದರೆಗಳಂತಹ ನಕಾರಾತ್ಮಕ ಶಕ್ತಿಗಳನ್ನು ದೂರವಿರಿಸಲು ಸಹಾಯಕವಾಗುತ್ತದೆ.
ಒಂದು ಸಣ್ಣ ಕ್ರಮದಿಂದಲೂ ಮನೆಯ ರಕ್ಷಣೆಯನ್ನು ಹೆಚ್ಚಿಸಬಹುದು.
ಅಪಾರ್ಟ್ಮೆಂಟ್ಗಳಲ್ಲಿ ಮನೆ ಮೇಲ್ಭಾಗದಲ್ಲಿ ಬಾವುಟ ಇಡುವುದು ಸಾಧ್ಯವಾಗದಿದ್ದರೆ, ಮುಖ್ಯ ಬಾಗಿಲಿನ ಹತ್ತಿರ ಒಂದು ಸಣ್ಣ ಹನುಮಧ್ವಜವನ್ನು ಇಡುವುದೇ ಸಾಕು.
ಇದು ಮನೆಯ ರಕ್ಷಣೆಯನ್ನು ಹೆಚ್ಚಿಸಿ ಕಂಟಕಗಳನ್ನು ದೂರವಿಡುತ್ತದೆ ಎಂದು ನಂಬಿಕೆ. ಹನುಮನು ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿರುವುದರಿಂದ ಅವರ ಧ್ವಜವು ವಿಶೇಷ ಶಕ್ತಿಯುತವಾಗಿರುತ್ತದೆ. ಯವರ ಸಲಹೆಯಂತೆ ಹನುಮಧ್ವಜವು ಅತ್ಯಂತ ಪರಿಣಾಮಕಾರಿ ಧ್ವಜವಾಗಿದೆ.




