Shivamogga ದಲ್ಲಿ ಭೀಕರ ರಸ್ತೆ ಅಪಘಾತ.

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ‘ದಿ ಡೆವಿಲ್’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅಭಿಮಾನಿಗಳ ಉತ್ಸಾಹದಿಂದ ಸಿನಿಮಾ ನೋಡುತ್ತಿದ್ಧಾರೆ. ನಿನ್ನೆ ರಾತ್ರಿಯಿಂದಲೇ ಥಿಯೇಟರ್ಗಳ ಮುಂದೆ Fans ಸಂಭ್ರಮಾಚರಣೆ ಜೋರಾಗಿದ್ದು, ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಅಭಿಮಾನಿಯೋರ್ವ ಬಲಿಯಾಗಿದ್ದಾನೆ.
ಇದನ್ನು ಓದಿ : ಹೊಸ ವರ್ಷಕ್ಕೆ ಗೈಡ್ಲೈನ್ಸ್ ಬಿಡುಗಡೆ
ಅಭಿಮಾನಿ ಬಲಿ
ಡೆವಿಲ್ ಸಿನಿಮಾಗಾಗಿ ನಿನ್ನೆ ರಾತ್ರಿಯಿಂದಲೇ ರಾಜ್ಯದಲ್ಲಿ ಸಂಭ್ರಮಾಚರಣೆ ಜೋರಾಗಿದ್ದು, Shivamogga ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಈ ವೇಳೆ ಭೀಕರ ಅಪಘಾತ ಸಂಭವಿಸಿ ಯುವಕ ಸಾವನಪ್ಪಿದ್ದಾನೆ. ಇನ್ನು ಮೃತ ಯುವಕನನ್ನು 26 ವರ್ಷದ ಪುನೀತ್ ಎಂದು ಗುರುತಿಸಲಾಗಿದೆ.
ಸ್ಥಳದಲ್ಲೇ ಪ್ರಾಣ ಬಿಟ್ಟ ಯುವಕ
ವಿನಾಯಕ ಚಿತ್ರಮಂದಿರದಲ್ಲಿ ‘ದಿ ಡೆವಿಲ್’ ಸಿನಿಮಾ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಪುನೀತ್, ಸ್ನೇಹಿತರೊಂದಿಗೆ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ ಎದುರಿಗೆ ಬಂದ ರಾಜಹಂಸ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪುನೀತ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಈ ಅಪಘಾತ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಇದನ್ನು ನೋಡಿ : SURESH GOWDA ವಿರುದ್ಧ ಶಿವಲಿಂಗೇಗೌಡ ಗರಂ – ಕೋತಿ ತಿಮ್ಮಣ್ಣನ ತರ ಆಡ್ಬೇಡ ಎಂದ ಶಾಸಕ




