ಹಳೆ ವರ್ಷ ಮುಗೀತಿದೆ.. ಮೊದಲು ನ್ಯೂ ಇಯರ್ ಗೈಡ್ಲೈನ್ಸ್ ಬಗ್ಗೆ ತಿಳ್ಕೊಳ್ಳಿ..!

ಹೊಸವರ್ಷಕ್ಕೆ ದಿನಗಣನೆ ಶುರುವಾಗಿದೆ.. ಸಿಲಿಕಾನ್ ಸಿಟಿಯಲ್ಲಿ ಗ್ರ್ಯಾಂಡ್ ಆಗಿ ನ್ಯೂ ಇಯರ್ Welcome ಮಾಡೋಕೆ ಯುವ ಸಮೂಹ ಸಜ್ಜಾಗಿದೆ. ನಗರದ ಪಬ್… ಬಾರ್ ಅಂಡ್ ರೆಸ್ಟೋರೆಂಟ್ಗಳು ಆಲ್ ರೆಡಿ ನ್ಯೂ ಇಯರ್ಗೆ ಸಿದ್ಧತೆಗಳಾಗ್ತಿದೆ. ಇನ್ನೂ.. ಹೊಸ ವರ್ಷಕ್ಕೆ ಕಾಲಿಡೋಕೆ 20 ದಿನ ಇರೋವಾಗ್ಲೆೇ ಅದಕ್ಕೂ ಮುಂಚೆಯೇ ಪೊಲೀಸರು Guidelines ಬಿಟ್ಟಿದ್ದಾರೆ.
ಭದ್ರತಾ ಕ್ರಮ
ಗೋವಾ ಪಬ್ನಲ್ಲಿ ನಡೆದ ಅಗ್ನಿ ದುರಂತದ ನಂತರ ನಗರ ಪೊಲೀಸ್ ಇಲಾಖೆ ಹೆಚ್ಚು ಎಚ್ಚರದಿಂದ ನಡೆದುಕೊಳ್ಳಲು ಗೈಡ್ಲೈನ್ಸ್ ಪ್ರಕಟಿಸಿದೆ.
- ಪಾರ್ಟಿ ನಡೆಸಲು ಫೈರ್ ಡಿಪಾರ್ಟ್ಮೆಂಟ್ ಅನುಮತಿ ಕಡ್ಡಾಯ
- ಪರ್ಮಿಷನ್ ಇಲ್ಲದೆ ಕಾರ್ಯಾಚರಣೆ ಮಾಡಿದರೆ ಪಬ್–ಬಾರ್ಗಳನ್ನು ತಕ್ಷಣವೇ ಮುಚ್ಚಿಸುವ ಕ್ರಮ
- ಸಾಮರ್ಥ್ಯಕ್ಕಿಂತ ಹೆಚ್ಚು ಗ್ರಾಹಕರನ್ನು ಒಳ ಬಿಡುವುದಕ್ಕೆ ಕಟ್ಟುನಿಟ್ಟಿನ ನಿರ್ಬಂಧ
- ಅನಾಹುತ ಸಂಭವಿಸಿದರೆ ಮಾಲೀಕರ ಮೇಲೆ ಜವಾಬ್ದಾರಿ
- ಸಮಯ ಮೀರಿಸಿ ಸರ್ವೀಸ್ ನೀಡುವುದಕ್ಕೆ ನಿಷೇಧ
- ಸ್ಥಳದಲ್ಲಿ CCTV ಕಡ್ಡಾಯ, ಮಹಿಳೆಯರ ಸುರಕ್ಷತೆಗೆ ವಿಶೇಷ ಗಮನ
ಇದನ್ನು ಓದಿ : ತುಮಕೂರಿನಲ್ಲಿ Devil ಸಿನಿಮಾ ನೋಡಿ ಫ್ಯಾನ್ಸ್ ಫುಲ್ ಖುಷ್
ಡ್ರಗ್ ನಿಯಂತ್ರಣಕ್ಕೆ ಪೊಲೀಸರ ಹೊಸ ತಂತ್ರ
ನ್ಯೂ ಇಯರ್ ಸಂದರ್ಭದಲ್ಲಿ ಹೆಚ್ಚಾಗುವ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು ಪೊಲೀಸರು ‘ಕನ್ಸೂಮರ್ ಟು ಪೆಡ್ಲರ್’ ಟಾರ್ಗೆಟ್ ಮಾದರಿಯನ್ನು ಅನುಸರಿಸಲಿದ್ದಾರೆ.
- ಚೆಕ್ಪೋಸ್ಟ್ಗಳಲ್ಲಿ ಡ್ರಗ್ ಸೇವನೆ ಪರೀಕ್ಷೆ
- ಅನುಮಾನಾಸ್ಪದ ವ್ಯಕ್ತಿಗಳ ರಕ್ತ ಮಾದರಿ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸುವ ವ್ಯವಸ್ಥೆ
- ಎಸಿಪಿ ಹಂತದ ಅಧಿಕಾರಿಗಳನ್ನೇ ವಿಶೇಷವಾಗಿ ನೇಮಿಸಿ ಕಾರ್ಯಾಚರಣೆ
ಅಕ್ರಮ ವಿದೇಶಿಗರ ಮೇಲೆ ನಿಗಾ
Foreigners Regional Registration Office ಸಹಕಾರದಲ್ಲಿ ಅಕ್ರಮವಾಗಿ ನೆಲೆಸಿದ್ದ 302 ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ.
ಬಾಂಬ್ ನಿಷ್ಕ್ರಿಯ ದಳಕ್ಕೆ ವಿಶೇಷ ತರಬೇತಿ
ಅಹಿತಕರ ಘಟನೆಗಳನ್ನು ತಪ್ಪಿಸಲು ಒಂದು ತಿಂಗಳ ಮುಂಚೆಯೇ ಬಾಂಬ್ ನಿಷ್ಕ್ರಿಯ ದಳಕ್ಕೆ ತರಬೇತಿ ನೀಡಲಾಗುತ್ತಿದ್ದು, ಪ್ರಮುಖ ಸ್ಥಳಗಳಲ್ಲಿ ಕಠಿಣ ನಿಗಾವ್ಯವಸ್ಥೆ ಇರಲಿದೆ.
ಈ ಬಾರಿ ನ್ಯೂ ಇಯರ್ ಸಂಭ್ರಮಕ್ಕೆ 20 ದಿನ ಬಾಕಿ ಇರುವಾಗಲೇ ಪೊಲೀಸರು ಭದ್ರತಾ ಕವಚ ಸಿದ್ಧಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಸತತ ಕಾರ್ಯಾಚರಣೆಯಲ್ಲಿ ತೊಡಗಿರುವುದು ನಾಗರಿಕರಿಂದ ಮೆಚ್ಚುಗೆ ಗಳಿಸಿದೆ.
ಇದನ್ನು ನೋಡಿ : SEXUALLY HARASSMENT | ಕಾಮುಕ ಶಿಕ್ಷಕನಿಗೆ ಪೋಷಕರು ಕೊಟ್ಟ ಪನಿಷ್ಮೆಂಟ್ ಹೇಗಿತ್ತು ಗೊತ್ತಾ..!?




