ದುರಂತದ ಬಳಿಕ ಎಚ್ಚೆತ್ತ ಬೆಂಗಳೂರು, 350 ಕಟ್ಟಡ ಧ್ವಂಸಕ್ಕೆ GBA ಆಯುಕ್ತರ ನೋಟಿಸ್

ಬೆಂಗಳೂರು ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಲೀಕರುಗಳಿಗೆ GBA ನೋಟೀಸ್ ಜಾರಿ ಮಾಡಲು ತೀರ್ಮಾನಿಸಿದೆ. ರಾಜಧಾನಿ ಬೆಂಗಳೂರಲ್ಲಿ ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಕುಸಿಯುವ ಆತಂಕ ಹೆಚ್ಚಾಗಿರುವುದರಿಂದ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.
ಕಟ್ಟಡಗಳ ವಿರುದ್ಧ ಕ್ರಮ
ಕಳೆದ ವರ್ಷದ ಮಳೆಗಾಲದಲ್ಲಿ ಐದಕ್ಕೂ ಹೆಚ್ಚು ಹಳೆಯ ಕಟ್ಟಡಗಳು ಕುಸಿದಿದ್ದವು. ಈ ಬಾರಿ ಅಂತಹ ಅನಾಹುತಗಳನ್ನು ತಡೆಯುವ ಉದ್ದೇಶದಿಂದ ನಗರಪಾಲಿಕೆಗಳು ಅಪಾಯಕಾರಿಯಾದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿವೆ.

15 ಕಟ್ಟಡಗಳ ಕಾಂಪೌಂಡ್ ತೆರವು
ಪ್ರಸ್ತುತ ನಗರದಲ್ಲಿ ಸುಮಾರು 350ಕ್ಕೂ ಹೆಚ್ಚು ಅಪಾಯಕರ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈಗಾಗಲೇ 15 ಕಟ್ಟಡಗಳ ಕಾಂಪೌಂಡ್ ತೆರವುಗೊಳಿಸಲಾಗಿದೆ. ಉಳಿದ ಕಟ್ಟಡಗಳ ಮಾಲೀಕರಿಗೆ ತಕ್ಷಣವೇ ಸ್ವಯಂಪ್ರೇರಿತವಾಗಿ ಕಟ್ಟಡಗಳನ್ನು ಧ್ವಂಸಗೊಳಿಸಲು ಸೂಚಿಸಲಾಗಿದೆ.
ನಗರಪಾಲಿಕೆ ಸೂಚನೆ ಪಾಲಿಸದಿದ್ದರೆ, ನಗರಪಾಲಿಕೆಯೇ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿ ಅದರ ವೆಚ್ಚವನ್ನು ಸಂಬಂಧಿತ ಮಾಲೀಕರಿಂದ ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಿದೆ.
READ THIS : ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದ್ರೆ, ಕರ್ನಾಟಕವನ್ನ 10 ಬಾರಿ ಮಾರಾಟ ಮಾಡ್ತಾರೆ – ಯತ್ನಾಳ್
ನಗರಪಾಲಿಕೆವಾರು ಶಿಥಿಲ ಕಟ್ಟಡಗಳ ಸಂಖ್ಯೆ
- ಪೂರ್ವ ನಗರಪಾಲಿಕೆ – 51
- ಪಶ್ಚಿಮ ನಗರಪಾಲಿಕೆ – 60
- ದಕ್ಷಿಣ ನಗರಪಾಲಿಕೆ – 106
- ಉತ್ತರ ನಗರಪಾಲಿಕೆ – 84
- ಕೇಂದ್ರ ನಗರಪಾಲಿಕೆ – 49
ಗುರುತಿಸಲಾದ ಕಟ್ಟಡಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಜೊತೆಗೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕೆಲವು ಕಟ್ಟಡಗಳೂ ಸೇರಿವೆ. ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ನಗರಪಾಲಿಕೆ ಕಟ್ಟಡ ತೆರವು ಕಾರ್ಯವನ್ನು ವೇಗಗೊಳಿಸಿದೆ.

ಜೀವಹಾನಿಯನ್ನು ತಪ್ಪಿಸಲು ಸಹಕರಿಸಬೇಕೆಂದು ಮನವಿ
ಇನ್ನು ಕಟ್ಟಡ ಮಾಲೀಕರು ಸಹ ಜವಾಬ್ದಾರಿತನದಿಂದ ನಡೆದುಕೊಂಡು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಜೀವಹಾನಿಕಟ್ಟಡ ಮಾಲೀಕರು ಸಹ ಜವಾಬ್ದಾರಿತನದಿಂದ ನಡೆದುಕೊಂಡು ಶಿಥಿಲಾವಸ್ಥೆ ಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಜೀವಹಾನಿಯನ್ನು ತಪ್ಪಿಸಲು ಸಹಕರಿಸಬೇಕೆಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮನವಿ ಮಾಡಿದ್ದಾರೆ.

MUST WATCH : WATERMAN ಮೇಲೆ ಇದೆಂಥಾ ಹಲ್ಲೆ..?!- ನೀರು ತಡವಾಗಿ ಬಿಟ್ಟಿದ್ರು ಅಂತಾ ಗಲಾಟೆ




