Accident : ಗೋದಿ ತುಂಬಿದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಹೊಡೆದ ಪರಿಣಾಮ ಲಾರಿ ಉರುಳಿ ಬಿದ್ದಿದೆ. ರಸ್ತೆ ತುಂಬಾ ಗೋದಿ ಬಿದ್ದಿದ್ದು ಗೋದಿಗೆ ಜನರು ಮುಗಿಬಿದ್ದಿರೋ ಘಟನೆ ಶಿರಾದಲ್ಲಿ ನಡೆದಿದೆ.

Accident : ಗೋದಿ ತುಂಬಿದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಹೊಡೆದ ಪರಿಣಾಮ ಲಾರಿ ಉರುಳಿ ಬಿದ್ದಿದೆ. ಅಲ್ದೇ ರಸ್ತೆ ತುಂಬಾ ಗೋದಿ ಬಿದ್ದಿದ್ದು ಗೋದಿಗೆ ಜನರು ಮುಗಿಬಿದ್ದಿರೋ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಳಿಯಾರ್ ರಸ್ತೆಯ ಹುಯಿಲ್ ದೊರೆ ಬಳಿ ನಡೆದಿದೆ.

Accident – ಗೋದಿ ತುಂಬಿದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ
ಶಿರಾದ ಹುಯಿಲ್ದೊರೆ ಬಳಿಯ ತಿರುವಿನಲ್ಲಿ ವೇಗವಾಗಿ ಬಂದ ಲಾರಿಯೊಂದು ಗೋದಿ ತುಂಬಿಕೊಂಡು ಬರ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಒಂದು ಲಾರಿಯು ರಸ್ತೆ ಬಳಿ ಇರೋ ಕಂಬಕ್ಕೆ ಡಿಕ್ಕಿ ಹೊಡೆದು ಜಮೀನಿಗೆ ಉರುಳಿದೆ.
ಇದನ್ನು ಓದಿ : Devil Movie : ‘ಡೆವಿಲ್’ ಮೂರನೇ ಸಾಂಗ್ ಔಟ್!

ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾದ ಗೋದಿ
ಮತ್ತೊಂದು ಲಾರಿಯಲ್ಲಿದ್ದ ಗೋದಿಯು ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಗೋದಿಗಾಗಿ ಜನರು ಮುಗಿಬಿದ್ದಿದ್ದಾರೆ.
ಮಕ್ಕಳು, ವೃದ್ಧರು ಪೊರಕೆ ಹಿಡಿದು ಚೀಲದಲ್ಲಿ ಗೋದಿಯನ್ನು ತುಂಬಿಕೊಂಡಿದ್ದು ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ
ಇನ್ನು ಅಪಘಾತಕ್ಕೆ ಅವೈಜ್ಞಾನಿಕ ರಸ್ತೆಯಿಂದಲೇ ಅಪಘಾತಗಳು ಸಂಭವಿಸಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದು, ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ರು.
ಇನ್ನು ಘಟನಾ ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನು ನೋಡಿ : ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಬಸ್ ಕಲ್ಪಿಸುವಂತೆ ಅಧಿಕಾರಿಗಳಿಗೆ ರಾಜಣ್ಣ ಸೂಚನೆ




