ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಟೀಸರ್ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿತ್ತು. ಕೆಜಿಎಫ್ ಮೂಲಕ ದೊಡ್ಡ ಅಲೆಯನ್ನೇ ಸೃಷ್ಟಿಸಿರುವ ರಾಕಿ ಬಾಯ್ ಇದೀಗ ಟಾಕ್ಸಿಕ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯಸಿಯಾಗಿದ್ದಾರೆ. ಒಂದು ತಿಂಗಳ ಹಿಂದೆ ಯಶ್ ಬರ್ತಡೇಯಂದು ಬಿಡುಗಡೆಯಾಗಿದ್ದ ಟಾಕ್ಸಿಕ್ ಸಿನಿಮಾದ ಟೀಸರ್ ೫೮ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಟಾಕ್ಸಿಕ್ ಮೂವಿ ಕನ್ನಡ ಮತು ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈ ಹಿಂದೆ ಎಂದಿಗೂ ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯತ್ನ ಆಗಿರಲಿಲ್ಲ. ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಕೂಡ ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಡಿಸೆಂಬರ್ ಗೆ ಮುಂದೂಡಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ಕನ್ನಡ ಸಿನಿಮಾ ರಂಗ ಕಂಡ ಎರಡನೇ ಕನಸುಗಾರ.ನಮ್ಮ ಚಿತ್ರರಂಗವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸದಾ ಕನಸು ಕಾಣುವ ಛಲಗಾರ. ರಾಕಿ ಈಗ ಅದನ್ನು ಮತ್ತೊಂದು ಬಾರಿ ಸಾಬೀತುಪಡಿಸಲು ಮುಂದಾಗಿದ್ದಾರೆ.ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಟನೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಮಲಯಾಳಂನ ಗೀತು ಮೋಹನ್‌ದಾಸ್ ಅವರು ಟಾಕ್ಸಿಕ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಒಟ್ಟಿಗೆ ಶೂಟ್ ಆಗುತ್ತಿದ್ದು, ಈ ರೀತಿ ಆಗುತ್ತಿರುವುದು ಕನ್ನಡ ಇತಿಹಾಸದಲ್ಲಿ ಇದೇ ಮೊದಲು. ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳು ಮೊದಲು ಮೂಲ ಭಾಷೆಯಲ್ಲಿ ಶೂಟ್ ಮಾಡಿ ಉಳಿದ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ಕೆಲವೊಮ್ಮೆ ಎರಡು ಭಾಷೆಗಳಲ್ಲಿ ಸಿನಿಮಾಗಳು ಒಟ್ಟಿಗೆ ಶೂಟ್ ಆದ ಉದಾಹರಣೆ ಕೂಡ ಇದೆ. ಆದರೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಒಟ್ಟಿಗೆ ಟಾಕ್ಸಿಕ್ ಚಿತ್ರ ಶೂಟ್ ಇದುವರೆಗೆ ಆಗಿಲ್ಲ ಎಂದು ಟಾಕ್ಸಿಕ್ ಚಿತ್ರತಂಡ ಹೇಳಿದೆ.
ಕನ್ನಡ, ಇಂಗ್ಲಿಷ್ ಜೊತೆ ಹಿಂದಿ, ತೆಲುಗು, ತಮಿಳು,ಮಲೆಯಾಳಮ ಸೇರಿ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಲವು ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ ಡಬ್ ಆಗಲಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಸಿನಿಮಾವನ್ನು ರಚಿಸಿ ನಿರ್ದೇಶಿಸುತ್ತಿರುವ ಗೀತು ಮೋಹನದಾಸ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದವರು. ನಮ್ಮ ಗುರಿ ಇರುವುದು ಟಾಕ್ಸಿಕ್ ಸಿನಿಮಾವನ್ನು ಭಾರತ ಹಾಗೂ ಜಾಗತಿಕವಾಗಿ ಪ್ರತಿಧ್ವನಿಸುವಂತೆ ಮಾಡುವುದು ಎಂದು ನಿರ್ದೇಶಕರಾದ ಗೀತು ಮೋಹನದಾಸ್ ಅವರು ಹೇಳಿದ್ದಾರೆ.