ಯಾದಗಿರಿ : ಯಾದಗಿರಿ ಎಸ್ಪಿಗೆ ಒಲಿದ ಡಿಜಿ–ಐಜಿಪಿ ಕಮಂಡೇಶನ್ ಪ್ರಶಸ್ತಿ

ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್‌
ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್‌
ಯಾದಗಿರಿ

ಯಾದಗಿರಿ : ಪೊಲೀಸ್‌ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ 2024–25ನೇ ಸಾಲಿನ ಡಿಜಿ–ಐಜಿಪಿ ಕಮಂಡೇಶನ್‌ ಪ್ರಶಸ್ತಿಯನ್ನು ನೀಡಲಾಗ್ತಿದ್ದು, ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್‌ ಸಹ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಅತ್ಯುತ್ತಮ ಕಾರ್ಯಕ್ಷಮತೆ, ಸಮರ್ಪಣೆ ಹಾಗೂ ಶೌರ್ಯ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. 

ಎಸ್‌ಪಿ ಶಂಕರ್‌ ಅವರು ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿ, ಶ್ರದ್ಧೆ ಹಾಗೂ ಸತ್ಸಂಕಲ್ಪದ ಮೂಲಕ ಕಾರ್ಯ ನಿರ್ವಹಿಸಿದ್ದಾರೆ. ಅವರ ನೇತೃತ್ವದಲ್ಲಿ ಹಲವಾರು ಕಾರ್ಯಾಚರಣೆಯನ್ನು ನಡೆಸಿ ಜೂಜು, ಮರಳು ದಂಧೆ, ಗೂಂಡಾ, ಮದ್ಯದ ಕಳ್ಳಸಾಗಣೆ ಹಾಗೂ ಇತರೆ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿದ್ದಾರೆ.

ಜನರಲ್ಲಿ ಭದ್ರತೆ ಹಾಗೂ ನಂಬಿಕೆಯನ್ನು ಮೂಡಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುವ ಎಸ್‌ಪಿ ಶಂಕರ್‌ ಅವರಿಗೆ ಈ ಪ್ರಶಸ್ತಿ ರಾಜ್ಯ ಮಟ್ಟದಲ್ಲಿ ಮಹತ್ವಪೂರ್ಣ ಮಾನ್ಯತೆಯಂತಾಗಿದೆ. ಅವರ ಶ್ರಮ, ಕಠಿಣ ಪರಿಶ್ರಮ ಮತ್ತು ನಿರಂತರ ಸೇವೆಗೆ ಇದೊಂದು ಗೌರವಪೂರ್ವಕವಾದ ಗುರುತಿನ ನುಡಿಯಾಗಿದ್ದು, ಜಿಲ್ಲೆಯಲ್ಲಿ ಸಂತಸದ ವಾತಾವರಣವನ್ನುಂಟುಮಾಡಿದೆ.

Author:

...
Sushmitha N

Copy Editor

prajashakthi tv

share
No Reviews