ಭಾರತದ ವನಿತೆಯರ ಕ್ರಿಕೆಟ್ ಕ್ಷೇತ್ರದ ಮಹತ್ವಾಕಾಂಕ್ಷೆಯ ಟೂರ್ನಿಯಾಗಿರುವ ಮಹಿಳಾ ಪ್ರೀಮಿಯರ್ ಲೀಗ್ 3ನೇ ಆವೃತ್ತಿಯು ಇಂದಿನಿಂದ ಆರಂಭವಾಗಲಿದೆ. ಭಾರತ ಮತ್ತು ವಿದೇಶಗಳ ಆಟಗಾರ್ತಿಯರು ಕಣಕ್ಕಿಳಿಯಲಿದ್ದಾರೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಈ ಬಾರಿ ಒಟ್ಟು ನಾಲ್ಕು ಸ್ಥಳಗಳಲ್ಲಿ WPL ನಡೆಯುತ್ತಿದೆ. ವಡೋದರಾದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಮೊದಲ ಆರು ಪಂದ್ಯಗಳು ಇಲ್ಲಿಯೇ ನಡೆಯಲಿವೆ. ಎರಡನೇ ಲೀಗ್‌ನ 8 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಅಂತಿಮ ಹಂತದಲ್ಲಿ 4 ಪಂದ್ಯಗಳು ಲಕ್ನೋದಲ್ಲಿ ಮತ್ತು 4 ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ. ಟೂರ್ನಿಯ ಎಲಿಮಿನೇಟರ್ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.
WPL-2025ರಲ್ಲಿ ಒಟ್ಟು 5 ತಂಡಗಳು ಭಾಗವಹಿಸುತ್ತಿವೆ. ಗುಜರಾತ್ ಜೈಂಟ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ಯುಪಿ ವಾರಿಯರ್ಸ್ ತಂಡಗಳು. ಒಟ್ಟು 22 ಪಂದ್ಯಗಳು ನಡೆಯಲಿದ್ದು, ಆ ಪೈಕಿ 20 ಪಂದ್ಯಗಳು ಗುಂಪು ಹಂತದಲ್ಲಿರುತ್ತವೆ. ಪ್ರತಿ ತಂಡವು 4 ತಂಡಗಳ ವಿರುದ್ಧ ಎರಡು ಬಾರಿ ಆಡಲಿವೆ.