ದೇಶ:
ಪಹಲ್ಗಾಮ್ ಉಗ್ರರ ದಾಳಿಯ ಕೃತ್ಯದ ಬಗ್ಗೆ ಚರ್ಚಿಸಲು ಮತ್ತು ಪಾಕಿಸ್ತಾನದ ವಿರುದ್ಧ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ವಿಶೇಷ ಅಧಿವೇಶನ ಕರೆಯಲೇಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಇನ್ನು ಮಲ್ಲಿಕಾರ್ಜುನ್ ಒಬ್ಬರೆ ಅಲ್ಲದೆ ಅನೇಕ ವಿಪಕ್ಷ ಸಂಸದರು ಕೂಡ ಈ ಬೇಡಿಕೆಯನ್ನು ಇಟ್ಟಿದ್ದಾರೆ. ಕಳೆದ ವಾರ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಜನ ಪ್ರವಾಸಿಗರು ಸಾವನ್ನಪ್ಪಿದ್ರು. ಈ ಘಟನೆಗೆ ದೇಶ ವಿದೇಶಗಳಿಂದ ಖಂಡನೆ ವ್ಯಕ್ತವಾಗಿತ್ತು. ಇದನ್ನ ಗಮನಿಸಿದ ಮಲ್ಲಿಕಾರ್ಜುನ್ ಖರ್ಗೆ ವಿಶೇಷ ಅಧಿವೇಶನಕ್ಕೆ ಆಗ್ರಹಿಸಿ ಪತ್ರ ಮೋದಿಗೆ ಬರೆದಿದ್ದಾರೆ. "ಈ ಕ್ಷಣದಲ್ಲಿ ಏಕತೆ ಮತ್ತು ಒಗ್ಗಟ್ಟು ಪ್ರದರ್ಶನ ಅತ್ಯಗತ್ಯವಾಗಿದ್ದು, ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಆದಷ್ಟು ಬೇಗ ಕರೆಯುವುದು ಉತ್ತಮ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿ ಒಗ್ಗಟ್ಟಿನ ಪ್ರದರ್ಶನ ಮಾಡಬೇಕಿದೆ. ಇಲ್ಲಿ ಯಾವುದೇ ಒಂದು ಪಕ್ಷವಲ್ಲ ಇಡೀ ದೇಶದ ಎಲ್ಲಾ ಪಕ್ಷಗಳು ಒಗ್ಗೂಡಿ ಕೆಲ್ಸ ಮಾಡಬೇಕಿರುವ ಅಗತ್ಯತೆ ತಲೆದೂರಿದೆ. ಆದ ಕಾರಣ ಮೋದಿಯವರು ಸರ್ವಪಕ್ಷಗಳ ಒಂದು ವಿಶೇಷ ಅಧಿವೇಶನವನ್ನು ಕೂಡಲೇ ಕರೆಯಬೇಕಿದೆ ಎಂದು ಒತ್ತಾಯಿದ್ದಾರೆ.