ಪಾವಗಡ:
ಗಡಿ ತಾಲೂಕಾದ ಪಾವಗಡ ಪಟ್ಟಣದ ಆದರ್ಶ ನಗರದ ಉಪ್ಪಾರ ಬೀದಿಯಲ್ಲಿ ಪುರಸಭೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಜನರು ಪರದಾಡುವಂತಾಗಿದೆ. ಇಲ್ಲಿನ ನಾಗರಿಕರಿಗೆ ಸಮರ್ಪಕ ಚರಂಡಿ ಆಗಲಿ, ನೀರಿನ ವ್ಯವಸ್ಥೆ ಒದಗಿಸಿಲ್ಲ, ಈ ಭಾಗದಲ್ಲಿ ಸದ್ಯಕ್ಕೆ ಪುರಸಭೆ ರಸ್ತೆ ಕಾಮಗಾರಿಯನ್ನು ಕೈಗೊಂಡಿದೆ. ಆದರೆ ಈ ಕಾಮಗಾರಿ ಕೇವಲ ನಾಮಕವಾಸ್ತವದಷ್ಟೇ ಸೀಮಿತವಾಗಿದೆ. ಈ ಪ್ರದೇಶದಲ್ಲಿ ಸ್ವಚ್ಛತಾ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ, ಎಂದು ನಾಗರಿಕರು ಆರೋಪಿಸಿದ್ದಾರೆ.
ಇನ್ನ ಉಪ್ಪಾರ ಬೀದಿಯಲ್ಲಿ ನೀರಿನ ಪೈಪ್ಗಳು ರಸ್ತೆಯ ಮೇಲ್ಭಾಗದಲ್ಲಿದ್ದು,ಅವುಗಳನ್ನು ಸುರಕ್ಷಿತವಾಗಿ ನೆಲಮಟ್ಟದಲ್ಲಿ ಹೊಂದಿಸುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲಇದರಿಂದ ನಾಗರಿಕರಿಗೆ ದಿನನಿತ್ಯ ತೊಂದರೆ ಉಂಟಾಗುತ್ತಿದೆ.ಅಲ್ಲದೆ, ಇಲ್ಲಿನ ಮಲಗುಂದಿಗಳು ತುಂಬಿ ಹೋದರೂ ಪುರಸಭೆ ಸಿಬ್ಬಂದಿಯಿಂದ ಯಾವುದೇ ಶುದ್ಧೀಕರಣ ಕಾರ್ಯ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದಿಷ್ಟಲ್ಲದೇ ಈ ಬೀದಿಯಲ್ಲಿರೋ ಯುಜಿಡಿಗಳು ತುಂಬಿ ದುರ್ನಾತ ಬೀರುತ್ತಿವೆ. ರಸ್ತೆಗಳು ಕಸದಿಂದ ತುಂಬಿದ್ದು ಸೊಳ್ಳೆಗಳ ಸಮಸ್ಯೆ ಹೆಚ್ಚಾಗಿದೆ. ನೀರಿನ ಪೈಪ್ಗಳು ಸರಿಯಾಗಿ ಅಳವಡಿಸಿಲ್ಲ ಎಂದು ಕಿಡಿಕಾರುತ್ತಿದ್ದಾರೆ.