ಸಿನಿಮಾ - ಟಿವಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಾರೇ ನೀ ಮೋಹಿನಿ ಖ್ಯಾತಿಯ ಐಶ್ವರ್ಯ

CONEMA - TV :  ಯಾರೇ ನೀ ಮೋಹಿನಿ ಧಾರಾವಾಹಿಯ ಮೂಲಕ ಮನೆಮಾತಾದ ನಟಿ ಐಶ್ವರ್ಯ  ತಮ್ಮ ವೈವಾಹಿಕ ಜೀವನಕ್ಕೆ ಸಡಗರದೊಂದಿಗೆ ಕಾಲಿಟ್ಟಿದ್ದಾರೆ. ಅವರು ರಾಕೇಶ್ ರಾಯ್ ಎಂಬುವವರ ಜೊತೆ ಸಪ್ತಪದಿ ತುಳಿದು ಜೀವನದ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಸುನೀಲ್ ಪುರಾಣಿಕ್ ನಿರ್ದೇಶನದ ‘ಮಹಾಸತಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಕನ್ನಡ ಟಿವಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅದಾದ ಮೇಲೆ ಶ್ರುತಿ ನಾಯ್ಡು ನಿರ್ಮಾಣದ ಜನಪ್ರಿಯ ಧಾರಾವಾಹಿಗಳಾದ ‘ಯಾರೇ ನೀ ಮೋಹಿನಿ’, ‘ಒಲವಿನ ನಿಲ್ದಾಣ’, ‘ಮಹಾದೇವಿ’ಗಳಲ್ಲಿ ಭಿನ್ನ ಭಿನ್ನ ಶೈಲಿಯ ಪಾತ್ರಗಳಲ್ಲಿ ಅಭಿನಯಿಸಿ ತಾವೊಂದು ಪ್ರತಿಭಾಶಾಲಿ ನಟಿಯಾಗಿರುವುದನ್ನು ಸಾಬೀತುಪಡಿಸಿದ್ದಾರೆ.

ಇನ್ನು ಐಶ್ವರ್ಯ ಅವರ ನಿಶ್ಚಿತಾರ್ಥ ಕಳೆದ ಜುಲೈನಲ್ಲಿ ನಡೆದಿದ್ದು, ಇದೀಗ ಬೆಂಗಳೂರು ನಗರದಲ್ಲಿಯೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭ ಅತ್ಯಂತ ವೈಭವವಾಗಿ ನಡೆಯಿದ್ದು, ಕಿರುತೆರೆಯ ಹಲವು ಕಲಾವಿದರು ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.

Author:

...
Keerthana J

Copy Editor

prajashakthi tv

share
No Reviews