ಶಿರಾ ತಾಲೂಕಿನ ಚಿನ್ನೆನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಂದ್ರ ಗ್ರಾಮದಲ್ಲಿ ನೀರು ಪೂರೈಸುವ ಮುಖ್ಯ ವಾಲ್ ಹೊಡೆದು ಅನಾವಶ್ಯಕ ರಸ್ತೆ ಪಕ್ಕದ ಕಾಲುವೆಗಳಿಗೆ ಸೇರಿ ಪೋಲಾಗುತ್ತಿದೆ. ಹೀಗಿದ್ರು ಕೂಡ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ತಾ ಇಲ್ಲ… ನೀರು ಪೋಲಾಗುತ್ತಿರೀದ್ರಿಂದ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇದು ಒಂದು ಸಮಸ್ಯೆ ಆದ್ರೆ ಮತ್ತೊಂದ್ಕಡೆ ನೀರು ಸರಬರಾಜು ಮಾಡುವ ಪೈಪ್ ಹೊಡೆದಿರೋದ್ರಿಂದ ಆ ಪೈಪಿನಲ್ಲಿ ಕಲುಷಿತ ನೀರು ಸೇರುತ್ತಿದೆ.
ಕಲುಷಿತ ನೀರು ಪೂರೈಕೆಯಿಂದ ಆರೋಗ್ಯ ಸಮಸ್ಯೆ ಉದ್ಭವಿಸುತ್ತಿದ್ದು ವಾಟರ್ ಮ್ಯಾನ್‌ಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕ್ತಿದ್ದಾರೆ. ಇನ್ನು ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಗಮನಕ್ಕೂ ತಂದ್ರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.