ವಿಜಯನಗರ: ಬಹು ನಿರೀಕ್ಷಿತ ಹಂಪಿ ಉತ್ಸವಕ್ಕೆ ಕ್ಷಣಗಣನೆ..!

ವಿಜಯನಗರ:

ವಿಶ್ವವಿಖ್ಯಾತ ಹಂಪಿ ಉತ್ಸವ ಫೆ.28 ರಿಂದ ಮಾ. 2 ರವರೆಗೆ ನಡೆಯಲಿದೆ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ 5 ಸಾವಿರಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾ ಪ್ರದರ್ಶಿಸಿ ಗತವೈಭವ ಮರುಕಳಿಸಲಿದ್ದಾರೆ. ಮುಖ್ಯಮಂತ್ರಿಗಳು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸಮ್ಮತಿ ಪಡೆದಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ನೂರಾರು ಕಲಾತಂಡಗಳು, ಸಾವಿರಾರು ಕಲಾವಿದರು ತಮ್ಮ ಕಲೆ ಪ್ರದರ್ಶಿಸಲಿದ್ದು, ವೇದಿಕೆಗಳು ಸಿದ್ಧವಾಗುತ್ತಿವೆ. ನಾಲ್ಕು ವೇದಿಕೆಗಳಲ್ಲಿ ಧ್ವನಿ ಮತ್ತು ಬೆಳಕು ಹಾಗೂ ಮೆರವಣಿಗೆಗಳಲ್ಲಿ ಕಳೆ ತರಲಿದ್ದಾರೆ. ಈಗಾಗಲೇ ಹಂಪಿ ಪರಿಸರದಲ್ಲಿ ತಯಾರಿ ನಡೆಯುತ್ತದೆ. ಕಳೆದ ವರ್ಷಕ್ಕಿಂತಲೂ ಬಾರಿ ಕಲಾವಿದರ ಸಂಖ್ಯೆ ಹಂಪಿ ಉತ್ಸವದಲ್ಲಿ ಹೆಚ್ಚಾಗಲಿದೆ.

ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಸಂತ ವೈಭವ, ಜಾನಪದ ವಾಹಿನಿ ಮೆರವಣಿಗೆಗೆ ಹೆಚ್ಚಿನ ಕಲಾವಿದರು ಪಾಲ್ಗೊಳ್ಳುತ್ತಾರೆ. ವೇದಿಕೆಗಳಲ್ಲಿ ಮೂರು ದಿನ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಕಲಾವಿದರು ಕಲಾಪ್ರದರ್ಶನ ನೀಡಲಿದ್ದಾರೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ಹೇಳಿದ್ದಾರೆಹಂಪಿ ಉತ್ಸವದಲ್ಲಿ ಕಳೆದ ವರ್ಷ 326 ಕಲಾ ತಂಡಗಳು ಪಾಲ್ಗೊಂಡಿದ್ದವು. ಬಾರಿ ಕಲಾವಿದರ ಸಂಖ್ಯೆ ಹೆಚ್ಚಾಗಲಿದೆ ಎಂದು ವಿಜಯನಗರ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ದಲಿಂಗೇಶ್ರಂಗಣ್ಣನವರ್ ಹೇಳಿದ್ದಾರೆ.

ಮೂರು ದಿನ ನಡೆಯಲಿರುವ ಸಂಭ್ರಮಕ್ಕೆ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮೂರು ದಿನ ನಡೆಯುವ ನಾನಾ ಭವ್ಯ ಕಾರ್ಯಕ್ರಮಗಳಲ್ಲಿ ಕಲಾವಿದರು ಉತ್ಸವದ ವೇದಿಕೆಗಳಲ್ಲಿ ತಮ್ಮ ಕಲೆ ಹೊರಹಾಕಲಿದ್ದಾರೆ. ಹಂಪಿ ಉತ್ಸವದ ಸಂಭ್ರಮ ಕಣ್ತುಂಬಿಕೊಳ್ಳಲು ನಾಡಿನ ನಾನಾ ಭಾಗಗಳಿಂದ ಜನರು ಆಗಮಿಸುತ್ತಾರೆ.

Author:

...
Editor

ManyaSoft Admin

Ads in Post
share
No Reviews