ಸಿನಿಮಾ:
ಟಾಲಿವುಡ್ ಮೋಸ್ಟ್ ಸಕ್ಸಸ್ ಪೇರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಬಗ್ಗೆ ಮತ್ತೊಂದು ಬಿಗ್ ನ್ಯೂಸ್ ಹರಿದಾಡ್ತಿದೆ. ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಯಾವಾಗ ನಟಿಸ್ತಾರೆ ಅಂತ ಅಭಿಮಾನಿಗಳು ಕಾಯ್ತ ಇದ್ರು ಇಂತಹದ್ದೆ ಒಂದು ಗಾಸಿಪ್ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಪುಷ್ಪ -2 ಸಕ್ಸಸ್‌ನಲ್ಲಿರುವ ಮೈತ್ರಿ ಮೂವಿ ಮೇಕರ್ಸ್ ಅವ್ರ ರಶ್ಮಿಕಾ ಜೊತೆ ಸಿನಿಮಾ ಮಾಡೋ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರಂತೆ. ಈ ಬಗ್ಗೆ ಹೌದು ನೋಡೋಣ ಅಂತ ನಿರ್ಮಾಣ ಸಂಸ್ಥೆ ರಶ್ಮಿಕಾಗೆ ಟ್ಯಾಗ್ ಮಾಡಿದ್ದು, ಅದಕ್ಕೆ ರಶ್ಮಿಕಾ ಹೌದು ಎಂಬಂತೆ ರಿಯಾಕ್ಟ್ ಮಾಡಿದ್ದಾರೆ. ಇನ್ನು ಈ ಸಂಭಾಷಣೆ ಪ್ರೇಕ್ಷಕರ ತಲೆಗೆ ಹುಳು ಬಿಟ್ಟಿದೆ. ಇನ್ನೇನಿದ್ರು ನಿರ್ಮಾಣ ಸಂಸ್ಥೆ ಅಫಿಷಿಯಲಿ ಅನೌನ್ಸ್ ಮಾಡಬೇಕಿದೆ.