ಇಂದು ಪ್ರೇಮಿಗಳ ದಿನವಾದ್ದರಿಂದ ಪ್ರೇಮಿಗಳು ಹಲವು ಪ್ಲಾನ್ ಮಾಡಿಕೊಂಡು ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ತಿದ್ದಾರೆ. ಇನ್ನೂ ಕೆಲವರು ಸಂಗಾತಿ ಇಲ್ಲದೇ ನಮಗೆ ಯಾರು ಬೀಳ್ತಾರೆ ಗುರು ಎಂದು ಕೊರಗುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಬಾಡಿಗೆಗೆ ಬಾಯ್ ಫ್ರೆಂಡ್ ಎಂಬ ಪೋಸ್ಟ್‌ರ್ ಜನರಲ್ಲಿ ಭಾರೀ ಸಂಚಲನ ಮೂಡಿಸಿದೆ.
ವ್ಯಾಲೆಂಟೈನ್ಸ್ ಡೇಗೆ ಬಾಯ್ ಫ್ರೆಂಡ್ ಬೇಕಾ? ಹಾಗಾದ್ರೆ ಜಸ್ಟ್ ಸ್ಕ್ಯಾನ್ ಮಾಡಿ, ಪೇ ಮಾಡಿ. ದುಡ್ಡು ಕೊಟ್ರೆ ಬಾಡಿಗೆಗೆ ಬಾಯ್ ಫ್ರೆಂಡ್ ಸಿಗುತ್ತಾನೆ. ಎಂಬ ಪೋಸ್ಟ್‌ರ್ ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ. ಇವತ್ತು ಒಂದು ದಿನಕ್ಕೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಮಾಡಲು ಬಾಯ್ ಫ್ರೆಂಡ್ ಸಿಗುತ್ತಾನೆ. ಬೆಂಗಳೂರಿನಲ್ಲಿ ಹೀಗೊಂದು ವಿಚಿತ್ರ ಆಚರಣೆಗೆ ಮುಂದಾಗಿದ್ದಾರೆ. ಕೇವಲ 389ರೂ ಕೊಟ್ಟರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಲಭ್ಯ. ನಗರದ ಜಯನಗರ, ಬನಶಂಕರಿ ಭಾಗದಲ್ಲಿ ಈ ರೀತಿ ಪೋಸ್ಟರ್ ರಾರಾಜಿಸುತ್ತಿವೆ. ಗೋಡೆಗಳಿಗೆ ಈ ರೀತಿಯ ವಿಚಿತ್ರ ಪೋಸ್ಟರಗಳನ್ನು ಅಂಟಿಸಲಾಗಿದ್ದು, ಬಾಯ್ ಫ್ರೆಂಡ್ ಬೇಕಾದ್ರೆ ಸ್ಕ್ಯಾನ್ ಮಾಡಿ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
‘Rent a BOYFRIEND’ ಎಂಬ ಕ್ಯೂ-ಆರ್ ಕೋಡ್ ಹಾಕಿ ನಿಮಗೆ ಯಾರೂ ಬಾಯ್ ಫ್ರೆಂಡ್ ಇಲ್ವಾ? ಹಾಗಿದ್ದರೆ ಯಾಕೆ ಚಿಂತೆ ಮಾಡ್ತೀರಿ. ಇಲ್ಲಿರುವ QR ಕೋಡ್ಗೆ ಸ್ಕ್ಯಾನ್ ಮಾಡಿ ಕೇವಲ 389 ರೂಪಾಯಿ ಪೇ ಮಾಡಿ. ಒಂದು ದಿನ ಸೆಲೆಬ್ರೇಟ್ ಮಾಡೋಕೆ ಹುಡುಗ ಸಿಗ್ತಾನೆ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಈ ಪೋಸ್ಟರ್ ನೋಡಿದ ಕೆಲವರು ವಿರೋಧ ವ್ಯಕ್ತಪಡಿಸಿದ್ದು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.