ಉಡುಪಿ:
ಸಾವು ಯಾವಾಗ ಹೇಗೆ ಬರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಾವುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇದೀಗ ಉಡುಪಿ ನಗರದಲ್ಲಿ ಖಾಸಗಿ ಫೈನಾನ್ಸ್ ಮಾಲೀಕ ಹೃದಯಾಘಾತದಿಂದ ಮನೆಯಲ್ಲಿ ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆ ಗುರುವಾರ ನಡೆದಿದೆ.
ಉಡುಪಿಯ ಕಿನ್ನಿಮೂಲ್ಕಿ ಕನ್ನರ್ಪಾಡಿ ನಿವಾಸಿ ಮುರುಳೀಧರ್ ಬಲ್ಲಾಳ್ (56) ಮೃತ ವ್ಯಕ್ತಿ ಆಗಿದ್ದು. ಮನೆಯವರಲ್ಲಿ ವಿಪರೀತ ಬೆವರು ಮತ್ತು ಸುಸ್ತಾಗುತ್ತಿದೆ ಎಂದು ಹೇಳಿ ಸುಧಾರಿಸಿಕೊಳ್ಳುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ, ತಕ್ಷಣ ಇವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯರು ಪರೀಕ್ಷೆ ಮಾಡಿದಾಗ ಸಾವನ್ನಪ್ಪಿರುವ ವಿಷಯವನ್ನು ತಿಳಿಸಿದ್ದಾರೆ.
ಇವರು ಉಡುಪಿ ಮಿತ್ರ ಆಸ್ಪತ್ರೆ ಎದುರಿನ ಬಲ್ಲಾಳ್ ಫೈನಾನ್ಸ್ ಮಾಲೀಕರಾಗಿದ್ದರು. ಬಲ್ಲಾಳ್ ಅವರು ಕನ್ನರ್ಪಾಡಿ ಜಯ ದುರ್ಗಾ ಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ, ಉಡುಪಿ ಚೇಂಬರ್ ಆಫ್ ಕಾಮರ್ಸ್ ಸದಸ್ಯರಾಗಿದ್ದರು ಹಾಗೂ ಹಲವಾರು ಸಂಘ-ಸಂಸ್ಥೆಗಳಲ್ಲಿಯೂ ಸಹ ಸಕ್ರಿಯರಾಗಿದ್ದರು.