UDUPI - ಉಡುಪಿಯಲ್ಲಿ ಅದ್ದೂರಿಯಾಗಿ ಜರುಗಿದ ಮೂಡು ಬೀಡು ಕಂಬಳ

ಕರಾವಳಿ ಕರ್ನಾಟಕದ ಒಂದು ಜನಪದ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಈ ಕ್ರೀಡೆಯನ್ನು ಏರ್ಪಡಿಸುತ್ತಿದ್ದರು. ಆದರೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ. ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳ ಅಂದರೆ ಸಾಕು ರಾಜ್ಯದ ನಾನಾ‌ ಕಡೆಯಿಂದ ವೀಕ್ಷಣೆಗಾಗಿ ಜನ ಬರುತ್ತಾರೆ. ಅದರಲ್ಲೂ ಈ ಕಂಬಳಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ.

 

ಕಂಬಳ ಅನ್ನೋದು ತುಳುನಾಡಿನ ಮಕ್ಕಳ ಭಾವನಾತ್ಮಕ ಆಚರಣೆಯು ಆಗಿದೆ. ಕಂಬಳ ಕ್ರೀಡೆಯಲ್ಲಿ ಜನಪ್ರಿಯತೆ ಪಡೆದಿರುವುದು ಮೂಡು ಬೀಡು ಕಂಬಳ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಬೀಡು ಕರೆಯಲ್ಲಿ ನಡೆಯುವ ಮೂಡು ಬೀಡು ಕಂಬಳ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಜಿಲ್ಲೆಯ ಅತೀ ದೊಡ್ಡ ಕಂಬಳವಾಗಿರುವ ಮೂಡು ಬೀಡು ಕಂಬಳ ಇಡೀ ಕರ್ನಾಟಕದ ಗಮನ ಸೆಳೆಯುತ್ತದೆ̤ ಉಡುಪಿಯ ಪ್ರಸಿದ್ಧ ಮೂಡುಬೀಡು ಕಂಬಳವು ಅದ್ದೂರಿಯಾಗಿ ನಡೆಯಿತು. ನೂರಾರು ಕೋಣಗಳು ಪಾಲ್ಗೊಂಡ ಈ ಕ್ರೀಡಾಕೂಟವು ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸಿತು. ಕರಾವಳಿ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಕಂಬಳವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಬಾರಿಯ ಕಂಬಳ ಹಬ್ಬವು ಮತ್ತಷ್ಟು ಉತ್ಸಾಹ ಮತ್ತು ರೋಮಾಂಚನಕಾರಿಯಾಗಿತ್ತು.

ಕರಾವಳಿಯ ಸೊಗಡನ್ನು ಬಿಂಬಿಸುವ ಕಂಬಳ ಸಾಂಪ್ರದಾಯಿಕ ಕ್ರೀಡೆ ಯಾಗಿದೆ. ಕಂಬಳ ನೂರಾರು ವರ್ಷಗಳಿಂದಲೂ ತುಳುನಾಡ ಜನರ ಜೀವದ ಕೊಂಡಿಯಾಗಿದೆ. ಅದರಲ್ಲೂ ಕಟಪಾಡಿ ಬೀಡುವಿನ ಮೂಡು ಬೀಡು ಕಂಬಳ ಉಡುಪಿ ಜಿಲ್ಲೆಯಲ್ಲಿ ತುಂಬಾನೆ ಫೇಮಸ್. ಸುಮಾರು ವರ್ಷಗಳ ಇತಿಹಾಸ ಇರುವ ಕಂಬಳ, ಕರಾವಳಿಗರ ನೆಚ್ಚಿನ ಜಾನಪದ ಕ್ರೀಡೆ. ಅದರಲ್ಲೂ ತನ್ನ ಗ್ರಾಮೀಣ ಸೊಗಡಿನಿಂದಲ್ಲೇ ಈ ಕ್ರೀಡೆ ಕರಾವಳಿಯಲ್ಲಿ ಸಿಕ್ಕಪಟ್ಟೆ ಫೇಮಸ್. ಮಣ್ಣಿನ ಮಕ್ಕಳ ಪ್ರತಿಷ್ಠೆಯ ಆಚರಣೆಯಲ್ಲೊಂದು. ಕಂಬಳ ಅನ್ನೋದು ತುಳುನಾಡಿನ ಮಕ್ಕಳ ಭಾವನಾತ್ಮಕ ಆಚರಣೆಯು ಆಗಿದೆ. ಕಂಬಳ ಕ್ರೀಡೆಯಲ್ಲಿ ಜನಪ್ರಿಯತೆ ಪಡೆದಿರುವುದು ಮೂಡು ಬೀಡು ಕಂಬಳ. ಪ್ರತಿ ಬಾರಿಯಂತೆ ಈ ಬಾರಿಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ 100 ಕ್ಕೂ ಹೆಚ್ಚು ಕಂಬಳ ಕೋಣ ಪಾಲ್ಗೊಂಡಿದ್ದವು.

Author:

...
Editor

ManyaSoft Admin

Ads in Post
share
No Reviews