ತುಮಕೂರು : ಮುಗಿಯುತ್ತಿಲ್ಲ ತುಮಕೂರು ಜಿಲ್ಲಾ ಆಸ್ಪತ್ರೆಯ ಕರ್ಮಕಾಂಡ...

ತುಮಕೂರು ಜಿಲ್ಲಾಸ್ಪತ್ರೆ
ತುಮಕೂರು ಜಿಲ್ಲಾಸ್ಪತ್ರೆ
ತುಮಕೂರು

ತುಮಕೂರು :

ತುಮಕೂರು ಜಿಲ್ಲಾಸ್ಪತ್ರೆಗೆ ನಿತ್ಯ ಸಾವಿರಾರು ಮಂದಿ ರೋಗಿಗಳು ಹತ್ತು ತಾಲೂಕುಗಳಿಂದ ಚಿಕಿತ್ಸೆಗೆಂದು ಬರುತ್ತಾರೆ. ಜಿಲ್ಲಾಸ್ಪತ್ರೆಯ ಕರ್ಮಕಾಂಡವನ್ನು ನಿಮ್ಮ ಪ್ರಜಾಶಕ್ತಿ ಒಂದೊಂದೆ ಬಟಾಬಯಲು ಮಾಡ್ತಾನೆ ಇದ್ರು ಕೂಡ ಆಸ್ಪತ್ರೆಯಲ್ಲಿ ಯಾವ ವ್ಯವಸ್ಥೆಯೂ ಕೂಡ ಸರಿಹೋಗ್ತಾ ಇಲ್ಲ. ಮತ್ತದೇ ಚಿಕಿತ್ಸೆಗೆ ರೋಗಿಗಳ ಪರದಾಟ, ಅಷ್ಟೇ ಯಾಕೆ ಸರ್ಟಿಫಿಕೇಟ್‌ಗೂ ಕೂಡ ಅಲೆದಾಡುವಂತಹ ದುಸ್ಥಿತಿ ಎದುರಾಗಿದೆ.

ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಆಸ್ಪತ್ರೆಯ ಡಿ ಎಸ್‌ ಗಮನಕ್ಕೆ ತರುವಂತ ಪ್ರಯತ್ನವನ್ನು ಕೂಡ ಪ್ರಜಾಶಕ್ತಿ ಟಿವಿ ಮಾಡಿತ್ತು. ಇಷ್ಟೆಲ್ಲಾ  ಸುದ್ದಿ ಮಾಡಿದ ಬಳಿಕ ಆದರೂ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಾಗಿರಬಹುದು ಎಂದು ರಿಯಾಲಿಟಿ ಚೆಕ್‌ ಮಾಡಲು ಹೋದ ನಮ್ಮ ಟೀಂಗೆ ಜಿಲ್ಲಾಸ್ಪತ್ರೆಯ ಮತ್ತೊಂದು ಕಳ್ಳಾಟ ಸಿಕ್ಕಿದೆ, ವಿಶೇಷಚೇತನರ ಕಾರ್ಡ್‌ಗಾಗಿ ಬೆಳಗ್ಗೆ 11 ಗಂಟೆಯಿಂದ ಕಾಯ್ತಾ ಇದ್ರು ಕೂಡ ಸಂಜೆ 4 ಆದರೂ ಕೂಡ ಅಧಿಕಾರಿಗಳು ಮಾತ್ರ ಇವರನ್ನು ಅತ್ತಿಂದಿತ್ತ ಅಲೆದಾಡಿಸಿದ್ದಾರೆ ಹೊರತು ಅವರಿಗೆ ಕಾರ್ಡ್‌ ಮಾಡಿಕೊಡಲು ಮುಂದಾಗಿಲ್ಲ.

ಪ್ರಜಾಶಕ್ತಿ ಟೀಂ ಜಿಲ್ಲಾಸ್ಪತ್ರೆಗೆ ಹೋಗ್ತಿದ್ದಂತೆ ಸಾರ್ವಜನಿಕರು ನಮ್ಮ ಕ್ಯಾಮೆರಾ ನೋಡಿ ಓಡೋಡಿ ಬಂದು ತಮ್ಮ ಸಮಸ್ಯೆಯನ್ನು ತೋಡಿಕೊಂಡರು. ತುಮಕೂರಿನಿಂದ ಸುಮಾರು 100 ಕಿಲೋ ಮೀಟರ್‌ ದೂರದಲ್ಲಿರೋ ಹುಳಿಯಾರ್‌ನಿಂದ ವಿಶೇಷಚೇತನನೊಬ್ಬ, ವಿಶೇಷಚೇತನ ಕಾರ್ಡ್‌ ಮಾಡಿಸಲು ಬೆಳಗ್ಗೆ 11 ಗಂಟೆಗೆ ಬಂದಿದ್ದು, ಸಂಜೆ 4 ಗಂಟೆ ಆದ್ರು ಅಲ್ಲಿಂದ ಇಲ್ಲಿಗೆ ಅಲೆದಾಡಿಸಿದ್ದಾರೆ ಬಿಟ್ಟರೆ ಕಾರ್ಡ್‌  ಮಾತ್ರ ಮಾಡಿಸಿಕೊಟ್ಟಿಲ್ಲ ಅಂತಾ ಆಕ್ರೋಶ ಹೊರಹಾಕಿದರು.

ಮತ್ತೊಬ್ಬರು ಚೇಳೂರಿನಿಂದ ಬಂದಿದ್ದು, ವಿಶೇಷ ಚೇತನ ಕಾರ್ಡ್‌ ಮಾಡಿ ಕೊಡಿ ಅಂತಾ ಕೇಳಲು ಹೋದರೆ, ನಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ, ಎಂದು ವಿಶೇಷಚೇತನರೊಬ್ಬರು ಪ್ರಜಾಶಕ್ತಿ ಕ್ಯಾಮೆರಾ ಮುಂದೆ ತಮ್ಮ ಅಳಲು ತೋಡಿಕೊಂಡರು.

ಒಟ್ಟಿನಲ್ಲಿ ತುಮಕೂರಿನ ಜಿಲ್ಲಾಸ್ಪತ್ರೆ ದಿನದಿಂದ ದಿನಕ್ಕೆ ಮತ್ತಷ್ಟು ಅದ್ವಾನದ ಸ್ಥಿತಿ ಆಗ್ತಿರೋದಂಥೂ ಸಾಬೀತಾಗಿದೆ. ಸರ್ಕಾರಿ ಆಸ್ಪತ್ರೆ ಇರೋದು ಬಡ ರೋಗಿಗಳ ಸೇವೆ ಮಾಡಲು, ಆದರೆ ಇವರು ಸೇವೆ ಮಾಡೋದಲ್ಲ ಬಡ ರೋಗಿಗಳ ರಕ್ತ ಹೀರುವವರಾಗಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆ ಬಗ್ಗೆ ಜಿಲ್ಲಾಸ್ಪತ್ರೆಯ ಡಿಸ್ಟ್ರಿಕ್ಟ್ ಸರ್ಜನ್ ಗೆ  ಗೊತ್ತಿದ್ದರೂ ಕೂಡ ಮೌನವಹಿಸಿರೋದು ಮಾತ್ರ ದುರಂತವೇ ಸರಿ.

Author:

...
Editor

ManyaSoft Admin

Ads in Post
share
No Reviews