ತುಮಕೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅಂದರ್..!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತುಮಕೂರು

ತುಮಕೂರು:

ತುಮಕೂರು ತಾಲೂಕಿನ ಪಂಡಿತನಹಳ್ಳಿ ಹ್ಯಾಂಡ್‌ ಪೋಸ್ಟ್‌ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೈಬರ್‌ ಪೊಲೀಸ್‌ ಠಾಣೆಯ ಪೊಲೀಸರು ಬುಧವಾರ ಬಂಧಿಸಿ, ಆರೋಪಿಗಳಿಂದ 4 ಕೆ ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಮಾಗಡಿ ತಾಲೂಕಿನ ಕುದೂರು ಗ್ರಾಮದ ಚಂದ್ರಶೇಖರ್‌ (21) ಮತ್ತು ಕೆ.ಎಸ್ ವಿನೋದ್‌ ಕುಮಾರ್‌‌ (21) ಎಂದು ಗುರುತಿಸಲಾಗಿದೆ, ಹೊನ್ನುಡಿಕೆ ಮಾರ್ಗದಲ್ಲಿರುವ ಪಂಡಿತನಹಳ್ಳಿ ಹ್ಯಾಂಡ್‌ ಪೋಸ್ಟ್‌ ಬಳಿ ಆರೋಪಿಗಳು ಕೈಯಲ್ಲಿ ಎರಡು ಬ್ಯಾಗ್‌ ಹಿಡಿದು ಅನುಮಾನಾಸ್ಪದ ರೀತಿ ಕುಳಿತಿದ್ದವರನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಆರೋಪಿಗಳು ಆಗಾಗ ಬಂದು ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡಿ ಹೋಗುತ್ತಿದ್ದರು, ಇವರು ಹಲವು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದು, ಈ ಹಿಂದೆ ಪೊಲೀಸರು ಬಂಧಿಸುವಾಗ ಆರೋಪಿಗಳು ಎಸ್ಕೇಪ್‌ ಆಗಿದ್ದರು, ಆದರೆ ಈ ಬಾರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಸುಮಾರು 4 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.

 

Author:

...
Editor

ManyaSoft Admin

share
No Reviews