ತುಮಕೂರು :
ರಾಜ್ಯ ಕಾಂಗ್ರೆಸ್ ಮನೆಯಲ್ಲಿ ಸರಿ ಇಲ್ಲ ಎಂಬುದು ಸತ್ಯ. ಅದರಂತೆ ಕಾಂಗ್ರೆಸ್ ಮನೆಯಲ್ಲಿ ನಾಯಕರ ಮುಸುಕಿನ ಗುದ್ದಾಟ ಇನ್ನು ತಣ್ಣಗಾಗುವ ಲಕ್ಷಣವೇ ಇಲ್ಲ ಎಂಬಂತಾಗಿದೆ. ಡಿಸಿಎಂ ಡಿಕೆಶಿ ಹಾಗೂ ಸಿಎಂ ಸಿದ್ದರಾಮಯ್ಯ ಬಣಗಳ ನಡುವೆ ಬಣ ಬಡಿದಾಟ ತಾರಕ್ಕೇರಿದ್ದು, ಹೈಕಮಾಂಡ್ ಮಧ್ಯ ಪ್ರವೇಶದ ಬಳಿಕ ನಾಯಕರು ಬಹಿರಂಗವಾಗಿ ಹೇಳಿಕೆ ನೀಡೋದನ್ನು ನಿಲ್ಲಿಸಿದ್ರು ಅಷ್ಟೇ, ಆದರೆ ನಾಯಕರ ನಡುವಿನ ಮುನಿಸು ಮಾತ್ರ ಶಮನವಾದ ಲಕ್ಷಣ ಕಾಣಿಸ್ತಿರಲಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಇಂದಿನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ,ಕೆ ಶಿವಕುಮಾರ್ ಆಗಮಿಸಿದರು, ಜಿಲ್ಲೆಯಲ್ಲಿದ್ದ ಸಚಿವರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗದಿರೋದು ಅನುಮಾನಕ್ಕೆ ದಾರಿ ಮಾಡಿಕೊಡ್ತಿದೆ.
ಇಂದು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯ 118ನೇ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಆಗಮಿಸಿದರು. ಆದರೆ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್, ಸಹಕಾರ ಸಚಿವ ರಾಜಣ್ಣ ಮಾತ್ರ ಹಾಜರಾಗಿರಲಿಲ್ಲ. ಅಷ್ಟೇ ಅಲ್ಲದೇ ಡಿಸಿಎಂ ಡಿಕೆಶಿ ತುಮಕೂರಿಗೆ ಆಗಮಿಸಿದ್ರು ಕೂಡ ಡಿಸಿಎಂ ಅವರನ್ನು ಸ್ವಾಗತಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ. ಪರಮೇಶ್ವರ್ ಆಗಮಿಸದಿರೋದು ಕಾಂಗ್ರೆಸ್ ಮನೆಯಲ್ಲಿ ಭಿನ್ನಾರಾಗ ಶಮನವಾಗಿಲ್ಲ ಎಂಬುದು ಸಾಬೀತಾಗುತ್ತಲೇ ಇದೆ.
ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರೋ ಕುಣಿಗಲ್ ಶಾಸಕ ರಂಗನಾಥ್, ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಕೂಡ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಸಚಿವರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಸಚಿವ ಕೆ.ಎನ್ ರಾಜಣ್ಣ ಮಾತ್ರ ಡಿಕೆಶಿ ಬರುವ ಮುನ್ನವೇ ಬೆಳಗ್ಗೆಯೇ ಮಠಕ್ಕೆ ಭೇಟಿ ನೀಡಿ ಹೋಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಮಾತ್ರ ಸಿದ್ದಗಂಗಾ ಮಠದತ್ತ ಸುಳಿಯದಿರೋದು ಕಾಂಗ್ರೆಸ್‌ನಲ್ಲಿ ಭಿನ್ನಮತ ಶಮನವಾಗಿಲ್ಲ ಎಂಬುದಕ್ಕೆ ಪುಷ್ಠಿಕೊಟ್ಟಂತಾಗಿದೆ. ಸಚಿವರಿಗೆ ಶ್ರೀಗಳ ಜನ್ಮದಿನ ಕಾರ್ಯಕ್ರಮದಲ್ಲಿ ಸಚಿವರಿಗೆ ಆಹ್ವಾನ ನೀಡಿರಲಿಲ್ವಾ..? ಅಥವಾ ಡಿಕೆಶಿ ಬಂದ್ರು ಎಂಬ ಕಾರಣ ಸಚಿವರು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಹಾಜರಾಗಿಲ್ವಾ ಎಂಬ ಪ್ರಶ್ನೆ ಎದ್ದಿದೆ. ಅದೇನೆ ಇರಲಿ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಎಲ್ಲಾ ನಾಯಕರು ಒಟ್ಟಾಗಿ ಹೋರಾಡಿ ಅಧಿಕಾರದ ಗದ್ದುಗೆ ಏರಿದ್ದು, ಇದೀಗ ಕಾಂಗ್ರೆಸ್ ಮನೆ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.