ತುಮಕೂರು:
ತುಮಕೂರಿನ ಎರಡು ಪ್ರಮುಖ ಪೊಲೀಸ್ ಠಾಣೆಗಳನ್ನು ಸ್ಥಳಾಂತರ ಮಾಡಿ ಜಿಲ್ಲಾ ಪೊಲೀಸ್ ಕಚೇರಿ ಪ್ರಕಟಣೆ ಹೊರಡಿಸಿದೆ. ತುಮಕೂರು ಸಂಚಾರ ಪೊಲೀಸ್ ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆಗಳನ್ನು ಶಿಫ್ಟ್ ಮಾಡಲಾಗಿದೆ.
ಇಷ್ಟು ದಿನ ತುಮಕೂರು ನಗರದ ಬಾರ್ ಲೈನ್ ರಸ್ತೆ ಅಥವಾ ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ತುಮಕೂರು ಸಂಚಾರ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತ ಇತ್ತು. ಮಹಿಳಾ ಪೊಲೀಸ್ ಠಾಣೆ ನಗರದ ಕುಣಿಗಲ್ ರಸ್ತೆಯಲ್ಲಿರುವ ಹಳೇ ಕಾರಾಗೃಹದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸ್ತಾ ಇತ್ತು. ಆದರೆ ಇದೀಗ ಎರಡೂ ಪೊಲೀಸ್ ಠಾಣೆಗಳನ್ನು ಸ್ಥಳಾಂತರ ಮಾಡಲಾಗಿದೆ.
ಹಳೇ ಕಾರಾಗೃಹದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಠಾಣೆಯನ್ನು ಬಾರ್ಲೈನ್ ರಸ್ತೆಯಲ್ಲಿದ್ದ ಸಂಚಾರ ಪೊಲೀಸ್ ಠಾಣೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನು ಇದೇ ರೀತಿ ಬಾರ್ಲೈನ್ ರಸ್ತೆಯಲ್ಲಿದ್ದ ಸಂಚಾರ ಪೊಲೀಸ್ ಠಾಣೆ ಇನ್ಮುಂದೆ ಹಳೇ ಕಾರಾಗೃಹ ಕಟ್ಟಡಕ್ಕೆ ಶಿಫ್ಟ್ ಆಗಲಿದೆ. ಈವೆರಡೂ ಪೊಲೀಸ್ ಠಾಣೆಗಳು ಇನ್ಮುಂದೆ ಸ್ಥಳಾಂತರಗೊಂಡ ಕಟ್ಟಡದಲ್ಲಿ ಇನ್ಮುಂದೆ ಕಾರ್ಯ ನಿರ್ವಹಿಸಲಿವೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರ ಗಮನಕ್ಕೆ ತಂದಿದೆ.