ತುಮಕೂರು : ತುಮಕೂರು ಟೌನ್ ಹಾಲ್ ವೃತ್ತದಲ್ಲಿ ಕಂಗೊಳಿಸಲಿದೆ ಎಚ್ಎಎಲ್ ಹೆಲಿಕಾಪ್ಟರ್!

ಹೆಚ್ಎಎಲ್ ಹೆಲಿಕಾಪ್ಟರ್ ವೇದಿಕೆಯ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ನೆರವೇರಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್
ಹೆಚ್ಎಎಲ್ ಹೆಲಿಕಾಪ್ಟರ್ ವೇದಿಕೆಯ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ನೆರವೇರಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್
ತುಮಕೂರು

ತುಮಕೂರು:

ತುಮಕೂರಿನ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ವತಿಯಿಂದ ಹೆಚ್ಎಎಲ್ ಹೆಲಿಕಾಪ್ಟರ್ ವೇದಿಕೆಯ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಇಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ನೆರವೇರಿಸಿದರು.

ಹೆಚ್ಎಎಲ್ ವೇದಿಕೆಯ ಶಂಕುಸ್ಥಾಪನೆಯನ್ನು ಇಂದು ತುಮಕೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಗೃಹ ಸಚಿವರು ನೇರವೇರಿಸಿದರು . ನಂತರ ಪಾಲಿಕೆ ಆಯುಕ್ತೆ ಅಶ್ವಿಜಾ ಅವರು ಮಾತನಾಡಿ, ಹೆಚ್ ಎ ಎಲ್ ಕಡೆಯವರಿಂದ ಎಲ್ ಸಿ ಹೆಚ್ (ಲೈಟ್ ಕಾಂಬ್ಯಾಕ್ಟ್ ಎಲೆಕಾಪ್ಟರ್) ನಮ್ಮ ಗುಬ್ಜಿಯಲ್ಲಿಯೇ ಪ್ರೋಡಕ್ಷನ್ ಆಗುತ್ತಿದೆ. ಅದರ ಮಾಡಲ್ ಅನ್ನು ಟೌನ್ ಹಾಲ್ ವೃತ್ತದಲ್ಲಿ ಇಡುತ್ತಿದ್ದೇವೆ. ವೇದಿಕೆಯ ಶಂಕುಸ್ಥಾಪನೆಗೆ ಚಾಲನೆ ನೀಡಲಾಗಿದೆ. ಎಲ್ ಸಿ ಹೆಚ್ ಎಲೆಕಾಪ್ಟರ್ 15 ಲಕ್ಷ ರೂಪಾಯಿ ಆಗಿದೆ. ಇನ್ನು ಒಂದು ತಿಂಗಳಲ್ಲಿ ಉದ್ಘಾಟನೆ ನಡೆಯಲಿದೆ ಎಂದರು.

ವೇಳೆ ನಗರ ಶಾಸಕ ಜ್ಯೋತಿಗಣೇಶ್ ಪಾಲಿಕೆ ಆಯುಕ್ತೆ ಅಶ್ವಿಜಾ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಪಾವಗಡ ಶಾಸಕ ವೆಂಕಟೇಶ್, ಹಾಗೂ ಪಾಲಿಕೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

Author:

share
No Reviews