ತುಮಕೂರು: ಇದು ಚಿಕ್ಕನಹಳ್ಳಿ ಪ್ರೌಢಶಾಲೆಯ ದುಸ್ಥಿತಿ - ಶೌಚಾಲಯಗಳಿವೆ, ಆದ್ರೆ ಬಳಕೆಗೆ ನೀರೇ ಬರ್ತಿಲ್ಲ

 ಚಿಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆ
ಚಿಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆ
ತುಮಕೂರು

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣ ಕಸದ ರಾಶಿಯಿಂದ ತುಂಬಿಹೋಗಿದ್ದು, ರೋಗ ಉತ್ಪಾದನಾ ಕೇಂದ್ರದಂತಾಗಿ ಮಾರ್ಪಟ್ಟಿದೆ. ಈ ಶಾಲೆಯಲ್ಲಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಕಟ್ಟಿಸಿಕೊಡಲಾಗಿದೆ. ಆದರೆ ಈ ಶೌಚಾಲಯಗಳಿಗೆ ನೀರಿನ ಸಂಪರ್ಕವೇ ಇಲ್ಲದೇ ಇರೋದರಿಂದ ಅನಾಥವಾಗಿ ಬಿದ್ದಿವೆ.

ಶೌಚಾಲಯದಲ್ಲಿ ನೀರು ಬರ್ತಿಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಬಯಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವ  ಶಿಕ್ಷಣ ಅಭಿಯಾನದಲ್ಲಿ ನಿರ್ಮಾಣಗೊಂಡ ತಾಲೂಕಿನ ಶೇ.೮೦ರಷ್ಟು ಶೌಚಾಲಯಗಳು ಇದೇ ರೀತಿ ನರಳುತ್ತಿವೆ. ಇಷ್ಟೆಲ್ಲಾ ಆದರೂ ಇಲಾಖೆ ಮಾತ್ರ ಮೌನವಾಗಿದೆ.  ಶಿರಾ ತಾಲೂಕಿನ ಭಾಗದಲ್ಲಿ ಬೆರಳೆಣಿಕೆಯ ಶಾಲೆಗಳಲ್ಲಿ ನೀರಿನ ವ್ಯವಸ್ಥೆಯಿದ್ದು, ಅಲ್ಲಿ ಮಾತ್ರ ಕೆಲವು ವಿದ್ಯಾರ್ಥಿಗಳು ಶೌಚಾಲಯ ಬಳಸುತ್ತಿದ್ದು, ಉಳಿದ ಹಲವಾರು ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯೂ ಕೂಡಾ ಇಲ್ಲ. ವಿದ್ಯಾರ್ಥಿಗಳೇ ಶಾಲೆಗೆ ಹೋಗುವಾಗ ಬಾಟಲಿಯಲ್ಲಿ ನೀರು ಕೊಂಡ್ಯೊಯುತ್ತಾರೆ. ಶೌಚಾಲಯಕ್ಕೆ ಇನ್ನೇಲಿಂದ ನೀರು ತರಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಶಿರಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಕೇಳಿದರೆ, ತಕ್ಷಣವೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಧ್ಯಾರ್ಥಿಗಳು ಮತ್ತು ಸ್ಥಳೀಯರು ತಿಳಿಸುತ್ತಿದ್ದಾರೆ.

ಈ ಶಾಲೆಯಲ್ಲಿ ಬಿಸಿಯೂಟದಲ್ಲಿ ಹೆಚ್ಚಾದ ಅಡುಗೆಯನ್ನ ವ್ಯವಸ್ಥಿತವಾಗಿ ವಿಲೇವಾರಿ ಮಾಡದೇ ಮರದಲ್ಲಿ ಬುಡದಲ್ಲಿ ಹಾಕುತ್ತಿದ್ದಾರೆ. ಇದರಿಂದ ಆಹಾರ ಕೊಳೆತು ಕೆಟ್ಟ ವಾಸನೆ ಬರ್ತಿದೆ. ಸೊಳ್ಳೆಗಳು ಕೂಡ ಹೆಚ್ಚಾಗುತ್ತಿದ್ದು, ರೋಗ ಹರಡುವ ಭೀತಿ ಎದುರಾಗಿದೆ.

 

Author:

...
Editor

ManyaSoft Admin

Ads in Post
share
No Reviews