ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವತುಮಕೂರು
ತುಮಕೂರು: ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿ ಶಿರಾದಡು ಬೆಟ್ಟದ ಚನ್ನೇನಹಳ್ಳಿ ಗ್ರಾಮದ ಉದ್ಭವಮೂರ್ತಿ ಶ್ರೀ ಗಂಗಾಧರೇಶ್ವರ ಸ್ವಾಮಿಯ 3ನೇ ವರ್ಷದ ರಥೋತ್ಸವ ಅದ್ಧೂರಿಯಾಗಿ ಜರುಗಿತು.3ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಸಂಜೆ 6.30ಕ್ಕೆ ಗಂಗಾಪೂಜೆಯೊಂದಿಗೆ ಆರಂಭವಾಗಿ ಕಲಶ ಪೂಜೆ ಮತ್ತು ಗಿರಿಜಾ ಕಲ್ಯಾಣೋತ್ಸವ ಹಾಗೂ ಮಂಗಳವಾರ ರುದ್ರಾಭಿಷೇಕ, ರಥಾಂಗಮದೊಂದಿಗೆ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.
ಬೆಳ್ಳಾವಿಯ ತರೂರು ಶಾಖಮಠದ ಮ.ನಿ.ಪ್ರ.ಸ್ವ. ಶ್ರೀ ಕಾರದ ವೀರಬಸವ ಮಹಾಸ್ವಾಮೀಜಿರವರು, ಮಾತನಾಡಿ ಶ್ರೀ ಗಂಗಾಧರೇಶ್ವರ ದೇವಲಾಯವು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ ಎಂದರು, ಮಕರ ಸಂಕ್ರಾಂತಿ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದು ಹೊಸ ಆರಂಭ,ಸಮೃದ್ಧಿ ಮತ್ತು ಕೃತಜ್ಞತೆಯ ಸಂಕೇತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಡಾ. ಟಿ.ಬಿ. ಜಯಚಂದ್ರ, ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಕಾರ್ಜೋಳ,ತುಮಕೂರು ಹಾಲು ಒಕ್ಕೂಟ ನಿರ್ದೇಶಕ .ಎಸ್.ಆರ್. ಗೌಡ, ಸದಸ್ಯರುಗಳು,ವಿವಿಧ ಅಧಿಕಾರಿ ವರ್ಗದವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾಧಿಗಳು ಹಾಗೂ ಜಿಲ್ಲಾ, ತಾಲೂಕು ಹಾಗೂ ಪಂಚಾಯತಿ ಹಾಲಿ, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಅಧಿಕಾರಿಗಳು, ಸದಸ್ಯರುಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.