tumkur - ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆಗೆ ಕ್ಷಣಗಣನೆ! ಹೇಗೆ ಕಂಗೊಳಿಸುತ್ತಿದೆ ಗೊತ್ತಾ ಸಿದ್ದಗಂಗಾ ಮಠ?

siddaganga matta
siddaganga matta
ತುಮಕೂರು

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಜಾತ್ರೆಯ ಪ್ರಯುಕ್ತ ನಡೆಯಲಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಜಾತ್ರೆಯ ಪ್ರಯುಕ್ತ ಸಿದ್ದಗಂಗಾ ಮಠ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಅಂತಲೇ ಪ್ರಸಿದ್ಧಿ ಪಡೆದಿದ್ದ ಶಿವಕುಮಾರ ಸ್ವಾಮೀಜಿ ನಡೆದಾಡಿದ್ದ ಪುಣ್ಯ ಭೂಮಿ ಇದೀಗ ಅಕ್ಷರಶಃ ಭೂಲೋಕದ ಸ್ವರ್ಗದಂತಾಗಿ ಬದಲಾಗಿದೆ.

ಹೌದು… ಇದೇ ಫೆ.೨೦ರಿಂದ ಸಿದ್ದಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಈ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವೂ ಸಿದ್ದಗಂಗಾ ಮಠದ ಆವರಣದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಡೆಯುತ್ತಿದ್ದು, ಇದಕ್ಕೆ ನಿನ್ನೆ ಅದ್ದೂರಿ ಚಾಲನೆ ದೊರೆಯಿತು. ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್‌ ವಸ್ತು ಪ್ರದರ್ಶನವನ್ನ ಉದ್ಘಾಟಿಸಿದ್ರು. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ರು.

 

ಇನ್ನು ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಮಳಿಗೆಗಳನ್ನ ಹಾಕಲಾಗಿದ್ದು, ತಮ್ಮ ತಮ್ಮ ಇಲಾಖೆಯ ಕಾರ್ಯಕ್ರಮಗಳನ್ನ ವಿವರಿಸುವ ಕೆಲಸ ಮಾಡಲಾಗ್ತಿದೆ. ಜೊತೆಗೆ ಕೃಷಿ ಉತ್ಪನ್ನಗಳು, ಕೈಗಾರಿಕಾ ವಸ್ತುಗಳ ಪ್ರದರ್ಶನ ಕೂಡ ನಡೆಯುತ್ತಿದೆ. ಜೊತೆಗೆ ಹಲವಾರು ಶಾಲೆಯ ಮಕ್ಕಳು ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದು, ವಿವಿಧ ವಿಜ್ಞಾನ ಪ್ರಯೋಗಗಳನ್ನ ಜನರಿಗೆ ತಿಳಿಸಿಕೊಡುತ್ತಿದ್ದಾರೆ.

 

ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದಲಿಂಗ ಸ್ವಾಮಿಜಿ, ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವದ ಅಂಗವಾಗಿ ನಾವು ಮಠದಲ್ಲಿ ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನವನ್ನು ನಡೆಸುತ್ತಿದ್ದೇವೆ. ಇಂದಿನಿಂದ 10 ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ಈ ವಸ್ತು ಪ್ರದರ್ಶನಕ್ಕೆ ತುಮಕೂರು ಜಿಲ್ಲಾಡಳಿತ ತುಂಬಾ ಬೆಂಬಲ ನೀಡಿದ್ದಾರೆ. ಎಲ್ಲಾ ಭಕ್ತರು ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನದ ಅನುಕೂಲ ಪಡೆದುಕೊಳ್ಳಬೇಕು ಅಂತಾ ಮನವಿ ಮಾಡಿದ್ರು.

ಇನ್ನು ವಸ್ತು ಪ್ರದರ್ಶನವನ್ನ ಉದ್ಘಾಟಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌, ಸಿದ್ದಲಿಂಗ ಶ್ರೀಗಳ ಜೊತೆ ವಸ್ತು ಪ್ರದರ್ಶನವನ್ನ ವೀಕ್ಷಿಸಿ, ಮಾಹಿತಿಯನ್ನ ಪಡೆದುಕೊಂಡ್ರು. ಬಳಿಕ ಮಾತನಾಡಿದ ಅವರು, ಮಠದಲ್ಲಿ ಹಿಂದಿನಿಂದಲೂ ಪ್ರತೀ ವರ್ಷ ವಸ್ತು ಪ್ರದರ್ಶನ ನಡೆಯುತ್ತಾ ಬಂದಿದೆ. ಈ ವರ್ಷ ಕೂಡ ಬಹಳ ಚೆನ್ನಾಗಿ ನಡೆಯುತ್ತಿದೆ. ಎಲ್ಲಾ ಇಲಾಖೆಯವರು ಕೂಡ ತುಂಬಾ ಪ್ರರಿಶ್ರಮದಿಂದ ಕೆಲಸ ಮಾಡಿದ್ದಾರೆ. ಖಾಸಗಿ ಸಂಸ್ಥೆಗಳು ಕೂಡ ಭಾಗವಹಿಸಿವೆ ಎಂದರು.

ಒಟ್ಟಿನಲ್ಲಿ ಜಾತ್ರೆಯ ಪ್ರಯುಕ್ತ ಸಿದ್ದಲಿಂಗ ಮಠ ಕಂಗೊಳಿಸುತ್ತಿದೆ. ಮತ್ತೊಂದೆಡೆ ದನಗಳ ಪರಿಷೆ ಕೂಡ ಆರಂಭವಾಗಿದ್ದು, ಹಳ್ಳಿಕಾರ್‌ ತಳಿಯ ದನಗಳು ನೋಡುಗರ ಮನ ಸೆಳೆಯುತ್ತಿವೆ.

Author:

...
Editor

ManyaSoft Admin

Ads in Post
share
No Reviews