ತುಮಕೂರು : ಶಿರಾ ತಾಲೂಕು ಆಡಳಿತ ಕಚೇರಿಯಲ್ಲಿ ಜನರಿಗೆ ಸೌಲಭ್ಯಗಳೇ ಸಿಗ್ತಿಲ್ಲ…!

ಶಿರಾ ತಾಲೂಕು ಆಡಳಿತ ಕಚೇರಿ
ಶಿರಾ ತಾಲೂಕು ಆಡಳಿತ ಕಚೇರಿ
ತುಮಕೂರು

ತುಮಕೂರು : ಶಿರಾ ನಗರ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಶಿರಾ ತಾಲೂಕಿನ ಜನರ ಶಕ್ತಿ ಕೇಂದ್ರಗಳಾದ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಒಲವು ತೋರುತ್ತಿಲ್ಲ ಎಂದು ಆರೋಪ ಮಾಡಲಾಗ್ತಿದೆ.

ಶಿರಾದಲ್ಲಿ ಐದು ವರ್ಷದ ಹಿಂದೆ 57 ಕೊಠಡಿಗಳ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ತಾಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಕಚೇರಿ, ಚುನಾವಣಾ ಶಾಖೆ, ಖಜಾನಾಧಿಕಾರಿಗಳ ಕಚೇರಿ, ಆಹಾರ ಶಾಖೆ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿವೆ. ಆದರೆ ಇಲ್ಲಿ ಸರ್ಕಾರದ ಸವಲತ್ತಿಗೆ ನಿತ್ಯ ಸಾವಿರಾರು ಮಂದಿ ಬರ್ತಾರೆ, ಆದರೆ ಇಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಮಾತ್ರ ಕೊಡ್ತಾ ಇಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ತಾಲೂಕು ಆಡಳಿತ ಕಚೇರಿಯ ಮೊದಲ ಮಹಡಿಯಲ್ಲಿ ಅಬಕಾರಿ, ಉಪ ನೋಂದಣಿ ಇಲಾಖೆಯ ಕೊಠಡಿಗಳಿವೆ. ಎರಡನೇ ಮಹಡಿಯಲ್ಲಿ ವಿಶಾಲವಾದ ಖಾಲಿ ಜಾಗ ಇದ್ದು, ಗೋಡೋನ್‌ನಂತೆ ಬಳಸಿಕೊಳ್ಳಲಾಗುತ್ತಿದೆ, ಇಲ್ಲಿನ ಜಾಗವನ್ನು ಸರಿಯಾಗಿ ಬಳಸಿಕೊಳ್ಳದಿರುವುದರಿಂದ ಜಾಗವು ಧೂಳಿನಿಂದ ಸಿಗರೇಟ್ ಪ್ಯಾಕ್, ಗುಟುಕಾ ಚೀಟಿ, ಮದ್ಯ ಪ್ಯಾಕೆಟ್ ಸೇರಿದಂತೆ ಅನೇಕ ಕಸದಿಂದ ತುಂಬಿದೆ. ಇಷ್ಟು ದೊಡ್ಡ ಕಟ್ಟಡ ಇದ್ದರೂ ಕೂಡ ಶೌಚಾಲಯದ ಕೊಠಡಿಗಳಿಲ್ಲದೇ ಸಾರ್ವಜನಿಕರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಮೊದಲ ಮಹಡಿಯಲ್ಲಿ ಪುಟ್ಟ ಶೌಚಾಲಯವಿದ್ದು, ಅದನ್ನು ಸಿಬ್ಬಂದಿಗಳ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಾಗೂ ಸಾರ್ವಜನಿಕರ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Author:

...
Editor

ManyaSoft Admin

Ads in Post
share
No Reviews