ತುಮಕೂರು : ನಾಮದ ಚಿಲುಮೆಯಲ್ಲಿ ಶೂಟಿಂಗ್ ಮಾಡ್ತಿದ್ದ ಸಿನಿಮಾ ತಂಡದ ಮೇಲೆ ರೇಡ್..!

ಚಿತ್ರೀಕರಣ ಸ್ಥಳಕ್ಕೆ ಅರಣ್ಯ ಇಲಾಖೆ ರೇಡ್‌ ಮಾಡಿರುವುದು.
ಚಿತ್ರೀಕರಣ ಸ್ಥಳಕ್ಕೆ ಅರಣ್ಯ ಇಲಾಖೆ ರೇಡ್‌ ಮಾಡಿರುವುದು.
ತುಮಕೂರು

ತುಮಕೂರು:

ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಬಹುತೇಕ ಸಿನಿಮಾಗಳು ಅನುಮತಿ ಇಲ್ಲದೇ ಚಿತ್ರೀಕರಣ ನಡೆಸುತ್ತಾ ಬಂದಿವೆ, ಅರಣ್ಯಗಳಲ್ಲಿ ಚಿತ್ರೀಕರಣ ಮಾಡುತ್ತಿರೋದನ್ನು ಇಲಾಖೆ ಚಿತ್ರತಂಡಗಳ ಮೇಲೆ ಕ್ರಮಕ್ಕೆ ಮುಂದಾಗಿದೆ. ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ  HMT ಗ್ರೌಂಡ್ಸ್‌ನಲ್ಲಿ ಶೂಟಿಂಗ್‌ ಮಾಡುತ್ತಿದ್ದ ವೇಳೆ ಮರಗಳನ್ನು ಕಡಿದಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಆಗ ಖುದ್ದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಬಳಿಕ ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಅರಣ್ಯದಲ್ಲಿ ಶೂಟಿಂಗ್‌ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ತುಮಕೂರಿನ ಫೇಮಸ್‌ ಟೂರಿಸ್ಟ್‌ ಪ್ಲೇಸ್‌ ನಾಮದ ಚಿಲುಮೆ ಬಳಿ ಅನುಮತಿ ಇಲ್ಲದೇ ಚಿತ್ರೀಕರಣ ಮಾಡ್ತಿದ್ದ ಚಿತ್ರತಂಡಕ್ಕೆ ಅರಣ್ಯ ಇಲಾಖೆ ಶಾಕ್‌ ನೀಡಿದ್ದು, ಏಕಾಏಕಿ ರೇಡ್‌ ಮಾಡಿ ಚಿತ್ರೀಕರಣ ಬಂದ್‌ ಮಾಡಿಸಿದ್ದಲ್ಲದೇ, ಚಿತ್ರೀಕರಣಕ್ಕೆ ಬಳಸಿದ್ದ ಕೆಲ ವಸ್ತುಗಳನ್ನು ಸೀಜ್‌ ಮಾಡಿದೆ.

ತುಮಕೂರಿನ ನಾಮದ ಚಿಲುಮೆ ಅರಣ್ಯ ಪ್ರದೇಶದಲ್ಲಿ ಕಳೆದ 5 ದಿನಗಳಿಂದ ತರುಣ್‌ ಸುಧೀರ್‌ ಪ್ರೊಡಕ್ಷನ್‌ನಲ್ಲಿ ನಟಿ ರಕ್ಷಿತಾ ಸಹೋದರ ರಾಣಾ, ಪ್ರಿಯಾಂಕಾ ನಟಿಸುತ್ತಿದ್ದ ಹೆಸರಿಡದ ಹೊಸ ಸಿನಿಮಾ ಶೂಟಿಂಗ್‌ ನಡೆಸುತ್ತಿತ್ತು. ಈ ಸಿನಿಮಾ ಶೂಟಿಂಗ್‌ನಲ್ಲಿ 50 ರಿಂದ 100 ಮಂದಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಾತ್ರಿ ಎಸಿಎಫ್‌ ಪವಿತ್ರಾ ನೇತೃತ್ವದಲ್ಲಿ ಸಿನಿಮಾ ಶೂಟಿಂಗ್‌ ನಡೆಯುತ್ತಿದ್ದ ಸ್ಥಳದ ಮೇಲೆ ಏಕಾಏಕಿ ರೇಡ್‌ ಮಾಡಿ ಚಿತ್ರೀಕರಣ ಬಂದ್‌ ಮಾಡಿಸಿದೆ.

ಅಸಲಿಗೆ ಈ ಚಿತ್ರತಂಡ ತರುಣ್‌ ಸುಧೀರ್‌ ಪ್ರೊಡಕ್ಷನ್‌ ಹೆಸರಿನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಕೋರಿ ಈ ಮೊದಲೇ ಅರ್ಜಿ ಸಲ್ಲಿಸಿತ್ತಂತೆ. ಫೆಬ್ರವರಿ 4, 13,14,18,20 ರಂದು ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಪತ್ರ ಬರೆಯಲಾಗಿತ್ತು. ಆದರೆ ಅರಣ್ಯ ಇಲಾಖೆ ಸಿನಿಮಾ ಶೂಟಿಂಗ್‌ಗೆ ಅನುಮತಿ ಕೊಟ್ಟಿರಲಿಲ್ಲ. ಹೀಗಾಗಿ ಅನುಮತಿ ಹೊರತಾಗಿಯೂ ಚಿತ್ರತಂಡ ಕಳೆದ ಮೂರು ದಿನಗಳಿಂದ ನಾಮದ ಚಿಲುಮೆ ಬಳಿ ಶೂಟಿಂಗ್‌ ಮಾಡ್ತಾ ಇತ್ತು. ಈ ಕಾರಣದಿಂದ ಅರಣ್ಯ ಇಲಾಖೆಯವರು ನಿನ್ನೆ ರಾತ್ರಿ ಏಕಾಏಕಿ ಸಿನಿಮಾ ಸೆಟ್‌ ಮೇಲೆ ದಾಳಿ ಮಾಡಿ, ರಾಣಾ ನಟನೆಯ ಸಿನಿಮಾದ ಚಿತ್ರೀಕರಣ ಬಂದ್‌ ಮಾಡಿಸಿದೆ. ಅಲ್ಲದೇ ಸಿನಿಮಾ ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾರವಾನ್‌, ಕ್ಯಾಮೆರಾ ಲೈಟ್‌, ಅಡುಗೆ ಸಾಮಾಗ್ರಿ, ಚೇರ್‌, ಟೆಂಪೋ, ಟ್ರಾವೆಲರ್‌ನನ್ನು ವಶಕ್ಕೆ ಪಡೆದುಕೊಂಡಿದೆ. ಸದ್ಯ ಸಿನಿಮಾ ಶೂಟಿಂಗ್‌ ಸ್ಟಾಪ್‌ ಆಗಿದ್ದು ಮುಂದಿನ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್‌ಗೆ ಅರಣ್ಯ ಇಲಾಖೆ ಪರ್ಮಿಷನ್‌ ಕೊಡುತ್ತಾ..? ಅಥವಾ ಇದೇ ರೀತಿಯ ಕಠಿಣ ನಿಲುವು ತಾಳುತ್ತಾ ಎಂದು ಕಾದುನೋಡಬೇಕಿದೆ.

Author:

share
No Reviews