ಬಂಧಿತ ಆರೋಪಿಗಳಾದ ಭರತ್ ಬಿನ್ ಸೆಲ್ವಂ ಮತ್ತು ಜಮಾಲುದ್ದೀನ್ತುಮಕೂರು
ತುಮಕೂರು:
ತುಮಕೂರು ಜಿಲ್ಲಾ ಪೊಲೀಸರು ಅಂತರ್ ರಾಜ್ಯದ ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ. ವಾಲ್ಮೀಕಿ ನಗರದಲ್ಲಿ ವಸಂತಮ್ಮ ಎಂಬ ಮಹಿಳೆ ತಮ್ಮ ಮೊಮ್ಮಗಳನ್ನು ಕರೆದುಕೊಂಡು ವಾಕ್ ಮಾಡುತ್ತಿದ್ದ, ವೇಳೆ ಅವರ ಕುತ್ತಿಗೆಯಲ್ಲಿದ್ದ 4 ಲಕ್ಷ ಬೆಲೆ ಬಾಳುವ ಚಿನ್ನದ ಸರಗಳನ್ನು ಬೈಕ್‌ನಲ್ಲಿ ಬಂದಿದ್ದ ಕಳ್ಳರು ಎಗರಿಸಿ ಪರಾರಿಯಾಗಿದ್ದರು. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇಲಾಖೆ ಸರಗಳ್ಳರನ್ನು ಹಿಡಿಯಲು ವಿಶೇಷ ತಂಡವನ್ನು ರಚನೆ ಮಾಡಲಾಗಿದ್ದು, ತಮಿಳುನಾಡು ಮೂಲದ ಭರತ್ ಬಿನ್ ಸೆಲ್ವಂ, ಜಮಾಲುದ್ದೀನ್ ಎಂಬ ಖದೀಮರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಇಬ್ಬರು ಕಳ್ಳರು ಎರಡು ಪ್ರಕರಣಗಳಲ್ಲಿ ಸರಗಳ್ಳತನ ಮಾಡಿದ್ದ ಮಾಲುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಸರಗಳ್ಳರನ್ನು ಪತ್ತೆ ಮಾಡಲು ತಿಲಕ್ ಪಾರ್ಕ್‌ನ ಸಿಪಿಐ ಪುರುಷೋತ್ತಮ, ಇನ್‌ಸ್ಟೆಪಕ್ಟರ್ ರಮೇಶ್, ಹೊಸ ಬಡಾವಣೆ ಠಾಣೆಯ ಎಎಸ್‌ಐ ವಿನ್ಸಂಟ್ ಸೇರಿ ಹಲವು ಸಿಬ್ಬಂದಿಗಳನ್ನೊಳಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಎಸ್‌ಪಿ ಅಶೋಕ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ.