ಸ್ವದೇಶಿ ಮೇಳ ಕಾರ್ಯಕ್ರಮತುಮಕೂರು
ತುಮಕೂರಿನ ಗಾಜಿನ ಮನೆಯಲ್ಲಿ ಜನವರಿ 8ನೇ ತಾರೀಕಿನಿಂದ 12ನೇ ತಾರೀಕಿನವರೆಗೆ ನಡೆಯುವ ಸ್ವಾವಲಂಬನೆಯ ಪರಿಕಲ್ಪನೆ ಸ್ವದೇಶಿ ಮೇಳ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರಕಿತು.ಸ್ವದೇಶಿ ಜಾಗರಣ ಮಂಚ್ ದಕ್ಷಿಣ ಪ್ರಾಂತೀಯ ಪ್ರಮುಖ್ ವಿಜಯಕೃಷ್ಣ, ಶಾಸಕ ಜಿ.ಬಿ ಜ್ಯೋತಿಗಣೇಶ್, ನಟಿ ತಾರಾ, ಜಿಲ್ಲಾಧಿಕಾರಿ ಶುಭಕಲ್ಯಾಣ್‌ರವರಿಂದ ಸಾರ್ವಜನಿಕ ಉದ್ಘಾಟನೆ ಸಮಾರಂಭ ನೆರವೇರಿತು.
ಇನ್ನೂ ಗಾಜಿನ ಮನೆಗೆ ಬಂದ ಸ್ವದೇಶಿ ಪ್ರೀಯರು ಸ್ವದೇಶಿ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದರು,ಮೇಳದಲ್ಲಿ ತರತರಹದ ಸ್ವದೇಶಿ ತಿಂಡಿ ತಿನಿಸುಗಳು,ಗೃಹಬಳಕೆ ವಸ್ತುಗಳು,ನಾರಿಯರಿಗೆ ವಿಧವಿಧವಾದ ಸಿರೇಗಳು,ಖಾದಿ ಉತ್ಪನ್ನಗಳು,ಸಾವಯುವ ಉತ್ಪನ್ನಗಳು,ಸಿರಿದಾನ್ಯಗಳು,ಆಯುರ್ವೇಧ ಔಷಧಿಗಳು ಮುಂತಾದ ಸ್ವದೇಶಿ ವಸ್ತುಗಳು ಮೇಳದಲ್ಲಿ ವಿಜೃಂಭಿಸುತ್ತಿದ್ದಾವೆ
ಸ್ವದೇಶಿ ಮೇಳಕ್ಕೆ ಆಗಮಿಸಿದ್ದ ನಟಿ ತಾರಾ ಸ್ವದೇಶಿ ಮೇಳವನ್ನ ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಮಾಡಿದ್ದಾರೆ. ತುಮಕೂರಿನಲ್ಲಿ ಒಂದು ರೀತಿಯಾಗಿ ಇದು ಯಶಸ್ವಿಯಾಗಿ ಹೊರಹೊಮ್ಮಿದೆ,ರೈತ ಬೆಳೆಯುವ ಬೆಳೆಗೆ ಸರಿಯಾಗಿ ಬೆಲೆ ಸಿಗುವಂತಾದರೆ ನಮ್ಮ ದೇಶ ಇನ್ನೂ ಅಭಿವೃದ್ಧಿ ಕಡೆ ಹೋಗಲಿದೆ ಎಂದು ತಿಳಿಸಿದರು
ಸ್ವದೇಶಿ ಮೇಳಕ್ಕೆ ಬಂದ ಗ್ರಾಹಕರು ಮಾತನಾಡಿ ಸ್ವದೇಶೀ ಮೇಳದಲ್ಲಿ ಏನೆಲ್ಲಾ ಇರುತ್ತೆ ಎಂಬ ಕುತೂಹಲ ನಮಗೂ ಇತ್ತು,ದೇಶಿಯತೆಗೆ ಒತ್ತು ಕೊಡುವ ವಸ್ತುಗಳ ಖರೀದಿ ನಮ್ಮ ಮನಸ್ಸಿಗೆ ತೃಪ್ತಿದಾಯಕವಾಗಿದೆ ಎಲ್ಲರೂ ಇನ್ನು ಮುಂದೆ ಸ್ವದೇಶಿ ವಸ್ತು ಕಡೆ ಹೋಗಬೆಕೆಂದು ಅಭಿಪ್ರಾಯಪಟ್ಟರು
ಮೇಳದಲ್ಲಿ ಜೇನು ಕೃಷಿ,ಕುಂಬಾರಿಕೆ ಹಾಗೆಯೇ ಮುಖ್ಯವಾಗಿ ಅಂಗವೀಕಲ ಮಹಿಳೆಯೊಬ್ಬರ ಸಾಧನೆ ಅತ್ಯಾಕರ್ಷಣೆಯಾಗಿತ್ತು ಪ್ರಜಾಶಕ್ತಿ ಟಿವಿಯೊಂದಿಗೆ ಮಾತನಾಡಿದ ಇವರುಗಳು ತಮ್ಮ ಕರಕುಶಲತೆ ಬಗ್ಗೆ ವಿವರಿಸಿದರು. ಒಟ್ಟಾರೆ ನಗರದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳೆ ಸ್ವದೇಶಿತನವನ್ನ ಎತ್ತಿ ತೋರಿಸುವಂತಿದೆ ದೇಶದ ಅಭಿವೃದ್ದಿ ದೇಶಿಯ ವಸ್ತುಗಳ ಮೌಲ್ಯತೆ ಜನರಿಗೆ ಅರಿವಾಗಬೇಕಿರುವುದಷ್ಟೆ ಪ್ರಮುಖವಾಗಿದೆ