ಔಟರ್ ರಿಂಗ್ ರೋಡ್ತುಮಕೂರು
ತುಮಕೂರು :
ತುಮಕೂರಿನ ಶಿವಮೊಗ್ಗ - ಬೆಂಗಳೂರು ಔಟರ್ ರಿಂಗ್ ರೋಡ್ ನಲ್ಲಿರುವ ಸ್ಟಾರ್ ಕನ್ವೆಕ್ಷನ್ ಹಾಲ್ ಹತ್ತಿರ ರೈಲ್ವೆ ಬ್ರೀಡ್ಜ್ ಕೆಳಗೆ ವಾಹನ ಸವಾರರು ಬಾಯಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ, ಬ್ರಿಡ್ಜ್ ಕೆಳಗೆ ಯಮಗುಂಡಿಗಳು ಬಿದ್ದಿರುವ ಪರಿಣಾಮ ಬೈಕ್ ಸವಾರರು ಎದ್ದು ಬಿದ್ದು ಹೋಗುವಂತಹ ದುರಂತ ಎದುರಾಗಿದೆ.
ಗುಂಡಿಗಳಿಂದ ಅದಗೆಟ್ಟು ನಿಂತಿರುವ ಈ ರಸ್ತೆಗೆ ಬಂದ್ರೆ ಸಾಕು ದುರ್ವಾಸನೆ, ಕಾರಿನ ವೀಂಡೋ ಕ್ಲೋಸ್ ಮಾಡಿದ್ರೂ ಸಹ ನುಗ್ಗಿ ಬರುತ್ತೆ ಈ ವಾಸನೆ, ಇನ್ನೂ ಕಳೆದ ಒಂದು ವಾರದಿಂದ ಯುಜಿಡಿ ಬಾಕ್ಸ್ ಹೊಡೆದು ನದಿಯಂತೆ ನೀರು ಹುಕ್ಕಿ ಬರ್ತಾಯಿದ್ದು ಇದರಿಂದ ಜನ ಯುಜಿಡಿ ನೀರಿನ ಅಭಿಷೇಕ ಮಾಡಿಕೊಂಡೆ ಹೊಗುತ್ತಿದ್ದಾರೆ . ಓಡಾಡುವುದಕ್ಕೂ ಆಗದೇ ಅಕ್ಕ ಪಕ್ಕದಲ್ಲಿ ವಾಸಿಸುತ್ತಿರುವ ಜನ ಈ ದುರ್ವಾಸನೆಯಿಂದ ಬೇಸತ್ತು ಹೋಗಿದ್ದಾರೆ.
ಚಿಕ್ಕ ಚಿಕ್ಕ ಮಕ್ಕಳು ಅನಾರೋಗ್ಯದಿಂದ ನರಳಾಡುವ ಸನ್ನಿವೇಶ ಬಂದಿದೆ, ದಿನ ಬೆಳಾಗಾದರೆ ಹೋಮ್ ಮಿನಿಸ್ಟರ್ ಬೆಂಗಳೂರಿಗೆ ಹೋಗೋಕೆ ಈ ರಸ್ತೆಯಲ್ಲೇ ಓಡಾಡುತ್ತಾರೆ ಆದರೆ ಇದರ ಕಡೆಗೆ ಗಮನ ಹರಿಸುತ್ತಿಲ್ಲ , ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೇ, ಇಲ್ಲಿ ಕಸ , ಚರಂಡಿ ನೀರು , ಅದಗೆಟ್ಟು ನಿಂತಿರುವ ರಸ್ತೆಯಿಂದ ಇಲ್ಲಿ ಬದುಕೋಕೆ ಕಷ್ಟ ಆಗ್ತಿದೆ ಇಷ್ಟಾದ್ರೂ ಪಾಲಿಕೆ ಆಡಳಿತ ಹಾಗೂ ಶಾಸಕರು ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ.