ತುಮಕೂರು : ಆಪರೇಷನ್ ಸಿಂಧೂರ ಸಕ್ಸಸ್ | ತುಮಕೂರಿನಲ್ಲಿ ಬೃಹತ್ ತಿರಂಗ ಯಾತ್ರೆ

ತುಮಕೂರು : ಆಪರೇಷನ್‌ ಸಿಂಧೂರ ಯಶಸ್ಸನ್ನು ಬೆಂಬಲಿಸುವ ಹಾಗೂ ರಾಷ್ಟ್ರದ ರಕ್ಷಣೆಗೆ ಸೇವೆ ಸಲ್ಲಿಸಿದ ಸೈನಿಕರ ಪರಾಕ್ರಮ ಹಾಗೂ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಇಂದು ತುಮಕೂರಿನಲ್ಲಿ ನಾಗರೀಕ ಸಮಿತಿ ವತಿಯಿಂದ ಬೃಹತ್‌ ತಿರಂಗ ಯಾತ್ರೆಯನ್ನು ನಡೆಸಲಾಯಿತು.

ಎಸ್‌ಐಟಿ ಕಾಲೇಜು ಮುಂಭಾಗದಿಂದ ಆರಂಭವಾದ ಈ ಯಾತ್ರೆ ಗಂಗೋತ್ರಿನಗರ, ಎಸ್.ಎಸ್. ಪುರಂ ಮಾರ್ಗವಾಗಿ ಜೂನಿಯರ್ ಕಾಲೇಜು ಮೈದಾನದವರೆಗೆ ಸಾಗಿತು. ಈ ವೇಳೆ ನೂರಾರು ನಾಗರಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಾಜಿ ಸೈನಿಕರು ಪಾಲ್ಗೊಂಡು ದೇಶಭಕ್ತಿಯನ್ನು ಪ್ರದರ್ಶಿಸಿದರು.

ಯಾತ್ರೆಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನ ಪರಿಷತ್‌ ಸದಸ್ಯ ಜಗ್ಗೇಶ್‌, ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, ವೀರೇಶಾನಂದ ಸರಸ್ವತಿ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು. ನಾಯಕರು ತಿರಂಗವನ್ನು ಕೈಯಲ್ಲಿ ಹಿಡಿದು, ಜನರ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ದೇಶಭಕ್ತಿಯ ಮಾತುಗಳನ್ನು ಹೊರಹಾಕಿದರು

Author:

...
Sushmitha N

Copy Editor

prajashakthi tv

share
No Reviews