ದ್ವಿಚಕ್ರ ವಾಹನಕ್ಕೆ ಡಷ್ಟರ್ ಕಾರು ಡಿಕ್ಕಿತುಮಕೂರು
ತುಮಕೂರು :ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಸಲು ಗೊಲ್ಲರಹಟ್ಟಿ ಗ್ರಾಮದ ಕುಶಾಲ್ ಎಂಬ ಯುವಕ ನಿನ್ನೆ ಬೆಳಿಗ್ಗೆ ತನ್ನ ವಾಟ್ಸಾಪ್ ನಲ್ಲಿ ಸುಮ್ಮನೇ RIP ಅಂತಾ ಸ್ಟೇಟಸ್ ಹಾಕಿಕೊಂಡಿದ್ದನಂತೆ. ಆಗ ಆತನ ಕೆಲ ಸ್ನೇಹಿತರು ಬೈದು ಆ ಸ್ಟೇಟಸ್ ಅನ್ನು ತೆಗೆಸಿದ್ದರು. ಆದರೆ ರಾತ್ರಿ ಆತ ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರ ಬಳಿ ನಡೆದ ಭೀಕರ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾನೆ.
ದ್ವಿಚಕ್ರ ವಾಹನಕ್ಕೆ ಡಷ್ಟರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕುಶಾಲ್ ಸ್ಥಳದಲ್ಲೇ ಸಾವನ್ಪಪಿದ್ದಾನೆ. ಜೆ.ಸಿ.ಪುರ ಸಮೀಪ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರು ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
KA 53 MF 4893 ನಂಬರಿನ ಕಾರು ಮಾಯಸಂದ್ರ ಪಾಳ್ಯದ ಬಳಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಷ್ಟರ್ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ 24 ವರ್ಷದ ಕುಶಾಲ್ ಎಂಬಾತ 50 ಅಡಿ ಆಳಕ್ಕೆ ಹಾರಿಕೊಂಡು ಹೋಗಿ ಬಿದ್ದಿದ್ದು, ಸ್ಥಳದಲ್ಲೇ ಸಾವನ್ಪಪ್ಪಿದ್ದಾನೆ. ಕಾರು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಗಾಯಾಳುವನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಟೌನ್ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.