ತುಮಕೂರು :
ಇಂದು ನಾಡಿನಾದ್ಯಂತ ಹನುಮ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸ್ತಿದ್ದು, ತುಮಕೂರಿನ ಹೆಗ್ಗೆರೆ ಗ್ರಾಮದಲ್ಲಿಯೂ ಅದ್ದೂರಿಯಾಗಿ ಹನುಮ ಜಯಂತಿ ಮಹೋತ್ಸವವನ್ನು ಆಚರಿಸಲಾಯಿತು, ಹನುಮ ಜಯಂತಿ ಪ್ರಯುಕ್ತ ಗ್ರಾಮದ ಬಲಮುರಿ ಗಣಪತಿ ಸ್ವಾಮಿ ಹಾಗೂ ಆದಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸೇರಿದಂತೆ ಆಂಜನೇಯ ಸ್ವಾಮಿಗೆ ಬೆಳಗ್ಗೆಯಿಂದಲೇ ಫಲಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಕಂರ್ಯಗಳನ್ನು ನೆರವೇರಿಸಲಾಯಿತು.
ಇನ್ನು ಆಂಜನೇಯ ಮೂರ್ತಿಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳಿಂದ ವಿಶೇಷ ಅಲಂಕಾರ ಮಾಡಿದ್ದು, ಭಕ್ತರ ಗಮನ ಸೆಳೆಯಿತು. ಈ ದೇವಾಲಯದಲ್ಲಿ ಬಲಮುರಿ ಗಣಪತಿ, ಆದಿ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ಮೂರ್ತಿಗಳು ಒಂದೇ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತವಾಗಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ.
ಇನ್ನು ಸ್ಥಳೀಯ ಸಂಘಟನೆಗಳ ವತಿಯಿಂದ ಮಹಾಪೂಜೆ ಬಳಿಕ ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತು.