ತುಮಕೂರು :
ತುಮಕೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ ವಿ.ಮರಿಯಪ್ಪ ನಿವೃತ್ತಿ ಹೊಂದಿದ್ದು, ಮೊನ್ನೆಯಷ್ಟೇ ಪೊಲೀಸರು ಅವರಿಗೆ ಅದ್ದೂರಿ ಬೀಳ್ಕೊಡುಗೆ ಕೊಟ್ಟಿದ್ದಾರೆ. ಈ ನಡುವೆ ಮರಿಯಪ್ಪ ನಿವೃತ್ತಿಯಿಂದಾಗಿ ಖಾಲಿಯಾಗಿದ್ದ ಜಾಗಕ್ಕೆ ಸಿ.ಗೋಪಾಲ್ ಅವರನ್ನು ನೇಮಕ ಮಾಡಲಾಗಿತ್ತು. ತುಮಕೂರು ಜಿಲ್ಲೆಯ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿರುವ ಸಿ.ಗೋಪಾಲ್ ಅವರು ಇಂದು ಎಸ್ ಪಿ ಕಚೇರಿಗೆ ಹಾಜರಾಗಿ ವರದಿ ಮಾಡಿಕೊಂಡಿದ್ದಾರೆ.
ಶುಕ್ರವಾರ ಸಂಜೆ ತುಮಕೂರು ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿದ ಸಿ.ಗೋಪಾಲ್ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ವೆಂಕಟ್ ಅವರನ್ನು ಭೇಟಿ ಮಾಡಿ, ಅವರಿಗೆ ಹೂಗುಚ್ಚ ನೀಡಿ ಬಳಿಕ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಇನ್ನು ಸಿ.ಗೋಪಾಲ್ ಅವರು ಈ ಹಿಂದೆ ಬೆಂಗಳೂರು, ಮೈಸೂರು, ಹಾವೇರಿ, ಸಿಐಡಿ, ಡಿಸಿಆರ್ಇ, ಸಿಸಿಬಿ ಮತ್ತು ಹುಬ್ಬಳ್ಳಿಯಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದು, ಇದೀಗ ತುಮಕೂರು ಎಎಸ್ ಪಿಯಾಗಿ ನೇಮಕಗೊಂಡಿದ್ದಾರೆ.