ತುಮಕೂರು:
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ತೊರೆಮಾವಿನಹಳ್ಳಿಯಲ್ಲಿ ತಡರಾತ್ರಿ ಚಿರತೆಯೊಂದು ಮನೆಯ ಮುಂದಿದ್ದ ನಾಯಿಯನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ.
ತೊರೆಮಾವಿನಹಳ್ಳಿ ಗ್ರಾಮದ ಶಂಕರಲಿಂಗಯ್ಯ ಎಂಬುವವರ ಮನೆಯಂಗಳದಲ್ಲಿ ಇದ್ದ ಸಾಕು ನಾಯಿಯನ್ನು ಚಿರತೆಯೊಂದು ತಡರಾತ್ರಿ ಮನೆಯ ಆವರಣಕ್ಕೆ ನುಗ್ಗಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದಿದೆ. ಚಿರತೆ ನಾಯಿಯನ್ನು ಹೊತ್ತೊಯ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿರತೆಯು ಕೆಲದಿನಗಳಿಂದ ತೊರೆಮಾವಿನಹಳ್ಳಿ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಚಿರತೆ ಓಡಾಟ ಕಂಡು ಗ್ರಾಮಸ್ಥರು ರಾತ್ರಿ ವೇಳೆ ಮನೆಯಿಂದ ಹೊರಬರಲು ಅತಂಕಪಡುತ್ತಿದ್ದಾರೆ. ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.